ಸೂರು:ವಿಶ್ವ ಯೋಗ ದಿನಾಚರಣೆ ಅಂಗವಾಗಿಯೇ ಪ್ರಧಾನಿ ಮೋದಿ ಜೂನ್-21 ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ-6.30ರ ವೇಳೆಗೇನೆ ಯೋಗ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಒಂದು ವಿಶೇಷ ದಿನದ ಕಾರ್ಯಕ್ರಮದಲ್ಲಿ 15 ಸಾವಿರ ಮಂದಿ ಯೋಗ ಮಾಡಲಿದ್ದಾರೆ.
ಈ ಒಂದು ಕಾರ್ಯಕ್ರಮದಲ್ಲಿ ಬರೋಬ್ಬರಿ 21 ಆಸನಗಳನ್ನ ಅಭ್ಯಾಸ ಮಾಡಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗಿ ಆಗೋ ಜನ ಬೆಳಗ್ಗೆ 5.30ಕ್ಕೇನೆ ಇಲ್ಲಿಗೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಇದಾದ ಮೇಲೆ ಅರಮನೆಯ ಎಲ್ಲ ದ್ವಾರಗಳು ಬಂದ್ ಆಗುತ್ತವೆ.
ಇದಕ್ಕೂ ಹೆಚ್ಚಾಗಿ ಕೊರೊನಾ ನೆಗೆಟಿವ್ ರಿಪೋರ್ಟ್ ಇಲ್ಲಿ ಕಡ್ಡಾಯವಾಗಿದೆ. ಯೋಗ ದಿನದ 72 ಗಂಟೆ ಮುಂಚೇನೆ ಈ ಒಂದು ಕೊರೊನಾ ರಿಪೋರ್ಟ್ ಪಡೆದಿರಲೇಬೇಕು. ಉಳಿದಂತೆ ಯೋಗ ಮ್ಯಾಟ್,ಶೂ ಇಡಲು ಬಾಕ್ಸ್,ಮೊಬೈಲ್ ಇಟ್ಟುಕೊಳ್ಳಲು ಕವರ್ ಈ ಎಲ್ಲ ವಸ್ತುಗಳನ್ನ ಕೇಂದ್ರ ಆಯುಷ್ ಇಲಾಖೆನೆ ನೀಡಲಿದೆ.
PublicNext
15/06/2022 07:19 am