ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ : ಸ್ವಲ್ಪ ಮೈಮರೆತರೂ ಜೀವಕ್ಕೆ ಕುತ್ತು

ಹೊಸದಿಲ್ಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಕಾಲದಲ್ಲಿ ಸರಣಿ ಹಬ್ಬಗಳು ಬಂದಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು.

*ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:

*ಹಬ್ಬಗಳ ಸೀಸನ್‌ನಲ್ಲಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ.

*ಭಾರತದ ಗುಣಮುಖ ಪ್ರಮಾಣ ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ನಾವು ಇದನ್ನು ಕಾಪಾಡಬೇಕಿದೆ.

*ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯೇ ಸರಿ.

*ಯಾವುದೇ ತರಹದ ಬೇಜವಾಬ್ದಾರಿ ನಮ್ಮ ಪ್ರಾಣಕ್ಕೆ ಕುತ್ತು ತರಬಲ್ಲದು ಎಂಬುದನ್ನು ನಾವು ಮರೆಯಬಾರದು.

*ಕೊರೊನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು.

*ಸರಣಿ ಹಬ್ಬಗಳು ದೇಶದಲ್ಲಿ ಹೊಸ ಚೈತನ್ಯ ತುಂಬಲಿ ಎಂದು ಹಾರೈಸಿದ ಪ್ರಧಾನಿ ಮೋದಿ.

*ದೇಶದ ಜನತೆಗೆ ಸರಣಿ ಹಬ್ಬಗಳ ಶುಭ ಕೋರಿದ ಪ್ರಧಾನಿ ಮೋದಿ.

*ಹಬ್ಬಗಳ ಸಮಯದಲ್ಲಿ ನಾನು ಪ್ರತಿಯೊಂದೂ ಕುಟುಂಬವೂ ಸುರಕ್ಷಿತವಾಗಿರುವುದನ್ನು ನೋಡಬಯಸುವುದಾಗಿ ಹೇಳಿದ ಪ್ರಧಾನಿ.

Edited By : Raghavendra K G
PublicNext

PublicNext

20/10/2020 06:18 pm

Cinque Terre

147.83 K

Cinque Terre

35