ಬೀದರ್: 1ರಿಂದ 8ನೇ ತರಗತಿಯವರೆಗಿನ ಅನುದಾನಿತ ಹಾಗೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಬಸವ ತತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಕೋಳಿಮೊಟ್ಟೆ ಸೇವನೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಕಾಳಜಿ ಸರ್ಕಾರಕ್ಕೆ ಇದ್ದರೆ ಹಣ್ಣು, ದ್ವಿದಳ ಧಾನ್ಯಗಳು, ಮೊಳಕೆ ಕಾಳು ತರಕಾರಿಗಳನ್ನು ಊಟದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಬಸವ ಮಂಟಪದ ಪ್ರಧಾನ ಸಂಚಾಲಕಿ ಮಾತೆ ಸತ್ಯಾದೇವಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಮೊಟ್ಟೆ ನೀಡುವ ಸರ್ಕಾರದ ಉದ್ದೇಶವನ್ನು ಸ್ವಾಗತಿಸಿರುವ ಭಾರತೀಯ ವಿದ್ಯಾರ್ಥಿ ಸಂಘ ಕೋಳಿಮೊಟ್ಟೆ ಮಾಂಸಾಹಾರವಲ್ಲ. ಅದು ಬೇಕಾದ ಪೋಷಕಾಂಶದ ದ್ರವ. ಮೊಟ್ಟೆ ವಿತರಣೆಗೆ ಜಾತಿ ಧರ್ಮದ ಲೇಪನ ಮಾಡಬಾರದು ಎಂದು ಹೇಳಿದೆ.
PublicNext
01/12/2021 08:05 am