ಬೆಂಗಳೂರು: ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಸದ್ಯ ಡ್ರಗ್ಸ್ ಪ್ರಕರಣವೊಂದರಲ್ಲಿ ಎನ್ಸಿಬಿ ಬಂಧಿಸಿದೆ. ಇದೇ ವಿಚಾರಕ್ಕೆ ಮಾತನಾಡಿದ ಮೋಹಕ ತಾರೆ ರಮ್ಯಾ ನಾಲ್ವರು ರೈತರ ಹತ್ಯೆ ಮಾಡಿದ ಆರೋಪ ಹೊತ್ತಿರುವ ಸಚಿವರ ಪುತ್ರ ಆರಾಮ್ ಆಗಿ ಹೊರಗೆ ತಿರುಗುತ್ತಿದ್ದಾನೆ.
ಡ್ರಗ್ಸ್ ಸೇವನೆ ಆರೋಪದಲ್ಲಿ ಆರ್ಯನ್ ಖಾನ್ ಬಂಧನವಾಗಿದೆ. ಮೃತ ರೈತರ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೊರಟ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸುತ್ತಾರೆ. ಇದು ನವ ಭಾರತ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಸೋಷಿಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ನಟಿ, ‘ಆರ್ಯನ್ ಖಾನ್ ಬಳಿ ಡ್ರಗ್ ಇರಲಿಲ್ಲ ಮತ್ತು ಅವರು ಡ್ರಗ್ಸ್ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರ ಬಂಧನವಾಗಿದೆ. ಮತ್ತೊಂದೆಡೆ 4 ರೈತರನ್ನು ಕೊಂದಿರುವ ಬಿಜೆಪಿ ಸಚಿವರ ಮಗನಿದ್ದಾನೆ. ಆದರೆ ಬಂಧನವಾಗಿಲ್ಲ.
ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.
PublicNext
06/10/2021 10:35 pm