ಬೆಂಗಳೂರು : ಡೆಡ್ಲಿ ಸೋಂಕು ಕೊರೊನಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೆ ಹೆಚ್ಚಳವಾಗುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ ಲಸಿಕೆ ಎರಡನೇ ಡೋಸ್ ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.100 ರಷ್ಟು ಗುರಿತಲುಪಿದ್ದು, ಈ ಸಾಧನೆ ಮಾಡಿದ ರಾಜ್ಯ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕುರಿತು ಸೋಮವಾರ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎರಡನೇ ಡೋಸ್ ವಿತರಣೆಯಲ್ಲಿ ಶೇ.100 ಗುರಿ ಸಾಧನೆ ಮಾಡಿದೆ. 10 ಜಿಲ್ಲೆಗಳು ಶೇ.90ರಷ್ಟುಮಂದಿಗೆ ಲಸಿಕೆ ನೀಡಿವೆ. ಈ ಸಾಧನೆ ಮಾಡಿ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಳೆದ ವಾರವೇ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟು ಕೊರೊನಾ ಲಸಿಕೆ ಅಭಿಯಾನದ ಮೊದಲ ಡೋಸ್ ವಿತರಣೆಯಲ್ಲಿ ಶೇ.100 ರಷ್ಟು ಪೂರ್ಣಗೊಂಡಿದೆ. ಮೊದಲ, ಎರಡನೇ ಹಾಗೂ ಮೂರನೇ ಡೋಸ್ ಸೇರಿ ಒಟ್ಟಾರೆ 9.54 ಕೋಟಿ ಡೋಸ್ ನಷ್ಟು ಕೊರೊನಾ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿನ ಹೊಸ ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಿದ್ದು, ಮತ್ತೆ ಹೆಚ್ಚಳವಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
PublicNext
01/02/2022 07:56 am