ಮಂಡ್ಯ: ಅವನ್ಯಾವನೋ ಕತ್ತಿ ಇದ್ದಾನಲ್ಲ. ಮಾಸ್ಕ್ ಹಾಕದೇ ನಿಯಮ ಉಲ್ಲಂಘನೆ ಮಾಡಿದ್ದಾನೆ. ಆತ ಮಂತ್ರಿ ಆಗಲು ನಾಲಾಯಕ್. ಹೀಗೆ ಮಂಡ್ಯದಲ್ಲಿ ಕೆಂಡಾಮಂಡಲವಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
ಇಷ್ಟ ಇದ್ದೋರು ಮಾಸ್ಕ್ ಹಾಕುತ್ತಾರೆ. ಇಲ್ಲದವ್ರು ಹಾಕೋದಿಲ್ಲ. ಒತ್ತಾಯ ಮಾಡಬೇಡಿ.ಹೀಗೆ ಒಮ್ಮೆ ಮಂತ್ರಿಯಾಗಿ ಉಮೇಶ್ ಕತ್ತಿ ಹೇಳಿರೋದು ಎಷ್ಟು ಸರಿ ಅಂತಲೇ ಪ್ರಶ್ನೆ ಮಾಡಿದ್ದಾರೆ ಸಿದ್ದರಾಮಯ್ಯ.
ಹೀಗೆ ಹೇಳಿರೋ ಉಮೇಶ್ ಕತ್ತಿ,ಮಂತ್ರಿ ಆಗಲು ನಾಲಾಯಕ್. ಒಬ್ಬ ಮಂತ್ರಿನೇ ಮಾಸ್ಕ್ ಹಾಕಲಿಲ್ಲ ಅಂದ್ರೆ, ಬೇರೆಯವರು ಯಾಕೆ ಹಾಕಬೇಕು. ಬೇರೆಯವರಿಗೆ ಫೈನ್ ಹಾಕ್ತಾರೆ, ಕೇಸ್ ಹಾಕ್ತಾರೆ. ಮಂತ್ರಿಗೂ ಕೇಸ್ ಹಾಕಬೇಕು ತಾನೇ ಅಂತಲೇ ಕೇಳಿದ್ದಾರೆ ಸಿದ್ದರಾಮಯ್ಯ.
PublicNext
19/01/2022 06:56 pm