ಕಲಬುರಗಿ: ಮೇಕೆದಾಟು ಪಾದಯಾತ್ರೆಯ ಬಗ್ಗೆ ಹೈ ಕೋರ್ಟ್ ಅಸಮಾಧಾನವೆತ್ತಿದ್ದು,ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.ಅವರ ಮೇಲೆ ಎಫ್ ಐ ಆರ್ ದಾಖಲು ಕೂಡ ಆಗಿದೆ.
ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಬೇಜವಬ್ದಾರಿಯಿಂದ ವರ್ತಿಸೋದು ನಾಚಿಕೇಗೇಡಿತನ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.
ಡಿಕೆಶಿ ತಾಕತ್ತು ಇದ್ರೆ ಟಚ್ ಮಾಡಿ ನೋಡಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಇವರು,ಡಿಕೆಶಿ ಸರ್ಕಾರ ಮತ್ತು ಕಾನೂನಿಗೆ ಯಾರು ತಾಕತ್ತು ಪ್ರಶ್ನೆ ಮಾಡೋದಲ್ಲ. ಮಾನವೀಯ ಸಂಸ್ಕೃತಿ ಅಲ್ಲಾ ಗುಂಡಾಗಿರಿ ಸಂಸ್ಕೃತಿ ಇದು. ಮೇಕೆದಾಟು ಯೋಜನೆ ಜಾರಿ ಮಾಡೋದಕ್ಕೆ ಸರ್ಕಾರ ಬದ್ದವಾಗಿದೆ. ತಮಿಳುನಾಡು ವಿರುದ್ದ ಪ್ರತಿಭಟನೆ ಮಾಡಲಿ ಕರ್ನಾಟಕ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡೋದು ಅಲ್ಲ ಎಂದರು.
PublicNext
12/01/2022 04:36 pm