ನವದೆಹಲಿ: ದೇಶದಲ್ಲಿ ಕೊರೊನಾ, ಒಮಿಕ್ರಾನ್ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ದಿಢೀರ್ ಕರೆದಿದ್ದಾರೆ.
ಎಲ್ಲಾ ರಾಜ್ಯದ ಸಿಎಂಗಳ ಜೊತೆಗೆ ಪಿಎಂ ಇಂದು ಸಂಜೆ 4ಕ್ಕೆ ಸಭೆ ನಡೆಸಲಿದ್ದಾರೆ. ಮೊನ್ನೆತಾನೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಅದಾದ ಕಳೆದ 24 ಗಂಟೆಗಳಲ್ಲಿ 1,68,063 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ದೇಶದಲ್ಲಿ 8,21,446 ಸಕ್ರಿಯ ಪ್ರಕರಣಗಳಿವೆ ಹಾಗೂ ಕೋವಿಡ್ ಪಾಸಿಟಿವಿಟಿ ದರವು 10.64ರಷ್ಟಿದೆ. 24 ಗಂಟೆಗಳ ಅಂತರದಲ್ಲಿ 69,959 ಮಂದಿ ಚೇತರಿಸಿಕೊಂಡಿದ್ದಾರೆ. ಸೋಮವಾರ ಕೋವಿಡ್ ದೃಢಪಟ್ಟ 1,79,723 ಪ್ರಕರಣಗಳು ವರದಿಯಾಗಿದ್ದವು.
PublicNext
11/01/2022 12:26 pm