ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯ ಮೊದಲದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾರಿ ಸುಸ್ತಾಗಿದ್ದರು. ಇನ್ನು ವಿಶ್ರಾಂತಿ ಪಡೆಯುತ್ತಿದ್ದಾಗ ಕೋವಿಡ್ ಪರೀಕ್ಷೆಗೆ ಬಂದ ಆರೋಗ್ಯ ಅಧಿಕಾರಿಗಳ ಮೇಲೆ ಡಿ.ಕೆ.ಶಿವಕುಮಾರ್ ಫುಲ್ ಗರಂ ಆದರು.
ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ ಡಿಕೆ ಶಿವಕುಮಾರ್ ಅವರು ಕೋವಿಡ್ ಟೆಸ್ಟ್ ಮಾಡಲು ಬಂದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಹಿಗ್ಗಾಮುಗ್ಗಾ ಜಾಡಿಸಿದರು. 'ಅವನ್ಯಾರೋ ಮಂತ್ರಿ ಹೇಳ್ತಾನೆ, ಇವರು ಬರ್ತಾರೆ. ಹೋಗ್ರೀ ರೀ' ಎಂದು ಕೂಗಾಡಿದ್ದಾರೆ. ಡಿಕೆಶಿ ಅವಾಜ್ಗೆ ಥಂಡಾ ಆದ ಸಿಬ್ಬಂದಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದ್ದಾರೆ.
PublicNext
10/01/2022 07:47 am