ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಲೇ ಇದೆ. ಇದರ ಹಿನ್ನೆಲೆಯಲ್ಲಿಯೇ ಇಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಮಹತ್ವದ ಸಭೆ ಮಾಡಿದ್ದಾರೆ. ಮುಂದಿನ ಎರಡು ವಾರ ಕಾಲ ಕಠಿಣ ಕ್ರಮ (ಟಫ್ ಕರ್ಫ್ಯೂ) ಜಾರಿಗೆ ಸರ್ಕಾರ ಮುಂದಾಗಿದೆ.
ಬೆಂಗಳೂರಿನಲ್ಲಿ ಗುರುವಾರದಿಂದ ಎರಡು ವಾರಗಳ ಕಾಲ ಶಾಲೆ ಬಂದ್ ಆಗಲಿದೆ. 1 ರಿಂದ 9 ತರಗತಿ ವರಗೆ ಅನ್ ಲೈನ್ ಕ್ಲಾಸ್ ಗೆ ಸರ್ಕಾರ ಒತ್ತು ನೀಡಿದೆ.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ದೆಹಲಿ, ಗೋವಾ , ತೆಲಂಗಾಣ, ಆಂದ್ರ ಪ್ರದೇಶ ಬರುವ ಪ್ರಯಾಣಿಕರಿಗೆ Rtpcr ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.
ಶುಕ್ರವಾರ ರಾತ್ರಿಯಿಂದ ನೈಟ್ ಕರ್ಪ್ಯೂ ಜಾರಿ ತರಲಾಗಿದೆ. ಶುಕ್ರ ವಾರ ರಾತ್ರಿ 10 ರಿಂದ ಸೋಮವಾರ 5 ಬೆಳಗ್ಗೆ ವೀಕೆಂಡ್ ಕರ್ಪ್ಯೂ ಜಾರಿಗೆ ತರಲಾಗಿದೆ.
ಯಾವುದೇ ರ‍್ಯಾಲಿ, ಪ್ರತಿಭಟನೆ, ಜನಜಂಗುಳಿ, ಜಾತ್ರೆ ಸಮಾವೇಶ ನಾಳೆಯಿಂದ ಬಂದ್ ಮಾಡಲಾಗಿದೆ.
ಸಿನಿಮಾ ,ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್ ದೇವಸ್ಥಾನ ನಲ್ಲಿ 50-50 ಜನರು ಮಾತ್ರ ಸೇರಬೇಕೆಂಬ ನಿಯಮ ಜಾರಿಗೆ ಮಾಡಲಾಗಿದೆ.
ನೈಟ್ ಕರ್ಪ್ಯೂ ಜನವರಿ 17 ರವರೆಗೆ ಮುಂದುವರಿಯಲಿದೆ. ಕಾಲೇಜುಗಳು ಕೂಡಾ ಇಡೀ ರಾಜ್ಯದಲ್ಲಿ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.
ಬಾರ್, ಪಬ್-ಹೋಟೆಲ್ ನಲ್ಲಿ 50-50 ರೂಲ್ಸ್ ಇನ್ನೂ ಎಂದಿನಂತೆ ಮುಂದುವರೆಯುತ್ತದೆ. ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಆರ್. ಅಶೋಕ್ ಹಾಗೂ ಡಾ.ಕೆ ಸುಧಾಕರ್ ತಿಳಿಸಿದರು.
ಸಾರ್ವಜನಿಕ ಸಭೆ-ಸಮಾರಂಭಗಳಿಗೆ 50 ರಿಂದ ಜನರು ಮಾತ್ರ ಇರಬೇಕು ಅಂತಲೇ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.
PublicNext
04/01/2022 10:25 pm