ಬೆಂಗಳೂರು: ಮಾರಣಾಂತಿಕ ನಿಫಾ ಸೋಂಕು ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡಿಲ್ಲ. ಈ ಸೋಂಕಿಗೆ ಔಷಧಿಯೂ ಇಲ್ಲ. ಚಿಕಿತ್ಸೆಯೂ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಕೇರಳದಲ್ಲಿ ನಿಫಾಗೆ ಮಗುವೊಂದು ಮೃತಪಟ್ಟಿದ್ದು, ಅಲ್ಲಿನ ಸರ್ಕಾರ ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟಿದೆ. ಕೇರಳ ಸರ್ಕಾರ ನಿಫಾ ತಡೆಗೆ ಕೈಗೊಂಡ ಕ್ರಮಗಳು ನಮಗೆ ಸಮಾಧಾನ ತಂದಿದೆ ಎಂದರು. ಕೇರಳದಲ್ಲಿ ಮೂರನೇ ಸಲ ನಿಫಾ ಬಂದಿದ್ದು, ಕೇರಳದಲ್ಲಿ ಅರಣ್ಯ ಪ್ರದೇಶವೇ ಹೆಚ್ಚಾಗಿದೆ. ಹೀಗಾಗಿ ಸೋಂಕು ಕಾಣಿಸಿಕೊಂಡಿರಬಹುದು. ಪ್ರಾಣಿಗಳು ತಿಂದು ಬಿಟ್ಟ ಹಣ್ಣನ್ನು ಮನುಷ್ಯ ತಿಂದರೆ ನಿಫಾ ಬರುತ್ತದೆ ಎಂದು ಸುಧಾಕರ್ ತಿಳಿಸಿದರು.
PublicNext
07/09/2021 06:46 pm