ಮೈಸೂರು: ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆಲ್ಲ ಬಿಜೆಪಿಯೇ ಹೊಣೆಗಾರರು ಎಂದು ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.
ಶಿವಮೊಗ್ಗದಲ್ಲಿ ಐಸಿಸ್ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಿದ್ದಾರೆ. ತಪ್ಪಾದ ದಾರಿಯಲ್ಲಿ ಹೋಗುತ್ತಿದ್ದಾರೆ. ಇದೇ ರಾಜ್ಯದಲ್ಲಿ ನಡೆಯುತ್ತಿರುವುದು. ಐಸಿಸ್ ಸಂಘಟನೆ ಅಂತಲ್ಲ.
ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ. ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆ ಬಿಜೆಪಿಯೇ ಹೊಣೆಗಾರರಾಗಿದ್ದಾರೆ. ಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
PublicNext
21/09/2022 05:27 pm