ಕಾಗವಾಡ : ಭಗವಂತನ ಶಕ್ತಿ ಎಲ್ಲಿಯವರೆಗೆ ನನ್ನ ಮೇಲಿರುತ್ತದೆಯೋ ಅಲ್ಲಿಯ ತನಕ ರೈತರ ಸಾಲವನ್ನು ಭರಿಸಲು ಸಿದ್ದನಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ಕಾಗವಾಡ ತಾಲೂಕಿನ ಜಕ್ಕಾರಟ್ಟಿ ಗ್ರಾಮದ ಶ್ರೀ ವಿಠ್ಠಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 100ಕ್ಕೂ ಹೆಚ್ಚು ರೈತರಿಗೆ 55ಲಕ್ಷದ 40ಸಾವಿರ ರೂಪಾಯಿಗಳ ಸಾಲ ವಿತರಿಸಿ ಮಾತನಾಡಿದ ಅವರು ರೈತರ ಬೆಳವಣಿಗೆಗೆ ಸಹಕಾರಿ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ರೈತರು ಸಹಕಾರಿ ಸಂಘಗಳಿಂದ ಸಾಲ ಪಡೆದು ಅದನ್ನು ಭರಣಾ ಮಾಡಲು ಹಣಕಾಸಿನ ತೊಂದರೆಯಿದ್ದಾಗ ಅಂಥ ಸಮಯದಲ್ಲಿ ಆ ಸಂಘಗಳ ಸುಮಾರು 46ಸಾವಿರ ಜನರ ಸಾಲವನ್ನು ಇಪ್ಪತ್ತು ವರ್ಷಗಳಿಂದ ತಾವೇ ಮರುಪಾವತಿ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಭಗವಂತನ ಶಕ್ತಿ ಎಲ್ಲಿಯವರೆಗೆ ನನ್ನ ಮೇಲಿರುತ್ತದೆಯೋ ಅಲ್ಲಿಯತನಕ ಕಾಗವಾಡ ಕ್ಷೇತ್ರದ ಅನಂತಪೂರ ಹಾಗೂ ಮದಭಾವಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲಾ ರೈತರ ಸಾಲವನ್ನು ಸ್ವಂತ ಹಣದಿಂದ ಮರುಪಾವತಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನೂ ಈ ಎರಡೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರೈತರ ಶಕ್ತಿಯಿಂದಲೇ ಇಡೀ ರಾಜ್ಯವೇ ನನ್ನನ್ನು ಗುರುತಿಸುವಂತಾಗಿದೆ. ಅಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಿ ಹೋದರೂ ಲಕ್ಷ್ಮಣ ಸವದಿ ಎಂದರೆ ಅಥಣಿಯವರು ಎಂದು ಗುರುತಿಸುತ್ತಾರೆ ಇದಕ್ಕೆ ಕಾರಣ ಈ ಭಾಗದ ರೈತರು ನೀಡಿದ ಬಲವೇ ಕಾರಣವಾಗಿದೆ ಎಂದು ರೈತರ ಸಹಕಾರವನ್ನು ಸ್ಮರಿಸಿದರು.
ಈ ಭಾಗದ ರೈತರ,ಬಡವರ ಸೇರಿದಂತೆ ಎಲ್ಲರ ಖುಣ ನನ್ನ ಮೇಲಿದೆ ನಿಮ್ಮ ಯಾವುದೇ ಕೆಲಸಗಳಾಗಬೇಕಾದರೆ ನನ್ನನ್ನು ಸಂಪರ್ಕಿಸಿ ಸಹಾಯಕ್ಕೆ ಧಾವಿಸುವುದಾಗಿ ಎರಡೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರೈತರಿಗೆ ಹಾಗೂ ಜಕ್ಕಾರಟ್ಟಿ ಗ್ರಾಮಸ್ಥರಿಗೆ ತಿಳಿಸಿದರು.
PublicNext
18/09/2022 04:25 pm