ಕನಕಪುರ : ರಾಮನಗರ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಪ್ರವಾಹ ತೀವ್ರವಾಗಿದ್ದು, ಸರ್ಕಾರ ಕೊಡುತ್ತಿರುವ ಪರಿಹಾರ ಸಂತ್ರಸ್ತರ ಊಟಕ್ಕೂ ಸಾಲುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹಕ್ಕೆ ಕನಕಪುರ ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಸೇತುವೆ ಕೊಚ್ಚಿ ಹೋಗಿದ್ದು, ಅದನ್ನು ವೀಕ್ಷಣೆ ಮಾಡಿ ನಂತರ ಮಾತನಾಡಿ, ಮನೆ ಉರುಳಿದವರಿಗೆ ಕೇವಲ ೫೦ ಸಾವಿರ ಹಾಗೂ ಗೋಡೆ ಉರುಳಿದ ಸಂತ್ರಸ್ತರಿಗೆ ೧೦ ಸಾವಿರ ನೀಡುತ್ತಿರುವುದು ಅವೈಜ್ಞಾನಿಕವಾಗಿದ್ದು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಕಂಡು ಕೇಳರಿಯದ ಭೀಕರ ಮಳೆಯಿಂದ ನೂರಾರು ಕಡೆಗಳಲ್ಲಿ ಹಾನಿಯಾಗಿದ್ದು, ಪ್ರಾಮಾಣಿಕವಾಗಿ ಸಂತ್ರಸ್ತರಿಗೆ ಅಧಿಕಾರಿಗಳು ಪರಿಹಾರ ವಿತರಿಸಬೇಕು ಅವರ ನೋವಿಗೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಹೇಳಿದರು.
PublicNext
01/09/2022 07:51 pm