ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಡಿ ಎಂದ ಸ್ವಾಮೀಜಿ!

ವರದಿ- ಸಂತೋಷ ಬಡಕಂಬಿ.

ಅಥಣಿ : ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬದ್ಧತೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಾಪಸ್ ಸಂಪುಟಕ್ಕೆ ಸೇರಿಸಬೇಕೆಂದು ನಿಲೋಗಿ ಮಠ ಸಿದ್ದಲಿಂಗ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ.

ಅವರು ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಮಾದ್ಯಮಗಳ ಜೊತೆ ಶ್ರೀಗಳು ಮಾತನಾಡಿ, ಶಾಪ ಎಂಬಂತೆ ತಾಲೂಕಿನಲ್ಲಿ 9 ಹಳ್ಳಿಗಳು ಕೃಷಿ ನೀರಾವರಿ ಯೋಜನೆಯಿಂದ ಇದುವರೆವಿಗೂ ವಂಚಿತವಾಗಿದೆ. ಹಲವು ಸರ್ಕಾರ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಕಕಮರಿ, ಕೊಟ್ಟಲಗಿ, ಸುತ್ತಮುತ್ತಲಿನ ಗ್ರಾಮಗಳು ಇದುವರೆಗೂ ನೀರಾವರಿ ಯೋಜನೆ ಇಲ್ಲದೆ ಇರುವುದರಿಂದ ಈ ಭಾಗದ ರೈತರು ಪರದಾಡುವಂತಾಗಿದೆ.

ಈ ಭಾಗಕ್ಕೆ ನೀರಾವರಿ ಯೋಜನೆ ರೂಪಿಸುವಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಮ್ಮಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆ ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಸದ್ಯ ಯೋಜನೆ ಅನುಷ್ಠಾನಕ್ಕೆ ಆಮೆಗತಿಯಲ್ಲಿ ಸಾಗುತ್ತಿದೆ ಈ ಭಾಗದ ಅಭಿವೃದ್ಧಿಗೆ ರಮೇಶ್ ಅವರಿಗೆ ಮತ್ತೆ ಜಲಸಂಪನ್ಮೂಲ ಸಚಿವ ಖಾತೆ ನೀಡುವಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಸದ್ಯ ಅಮ್ಮಾಜೇಶ್ವರಿ - ಕೊಟ್ಟಲಗಿ ಏತ ನೀರಾವರಿ ಯೋಜನೆ ಕೆ ಎನ್ ಎನ್ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಭಾಗದ ರೈತರ ಕುಲಕ್ಕೆ ಈ ಯೋಜನೆ ರತ್ನವಾಗಿದೆ ಮಾಜಿ ಸಚಿವ ಜಾರಕಿಹೊಳಿ ಒಳ್ಳೆಯ ಮನುಷ್ಯ, ಅನುಭವಿ ರಾಜಕಾರಣಿ, ಎಲ್ಲರಿಗೂ ಸಂಕಷ್ಟ ಬರುತ್ತದೆ ಅದರಂತೆ ಅವರಿಗೂ ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಮೇಶ್ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ಕೊಡಲಿ, ಈ ಭಾಗದ ರೈತರ ಶ್ರೇಯೋಭಿವೃದ್ಧಿಗೆ ಮತ್ತೆ ಜಲಸಂಪನ್ಮೂಲ ಸಚಿವರಾಗಲಿ ಎಂದು ಸಿದ್ದಲಿಂಗ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

Edited By : Somashekar
PublicNext

PublicNext

24/07/2022 09:53 pm

Cinque Terre

54.37 K

Cinque Terre

7