ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಕ್ರೇಟ್ ಸಮೀಕ್ಷೆ... ಕಮಲಪಾಳಯಕ್ಕೆ ಬಿಗ್ ಶಾಕ್..! ಮಿಷನ್ 150 ಅಷ್ಟು ಸುಲಭವಲ್ಲಾ...

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ 8- 10 ತಿಂಗಳು ಬಾಕಿ ಇರುವಾಗಲೇ ಮೇಲಿಂದ ಮೇಲೆ ಆಂತರಿಕ ಸಮೀಕ್ಷೆ ನಡೆಸಿರುವ ಬಿಜೆಪಿ ಪಾಳಯಕ್ಕೆ ಬಿಗ್ ಶಾಕ್ ಎದುರಾಗಿದೆ.. ಪಕ್ಷದ ಸಂಘಟನೆ ಅಥವಾ ಸರ್ಕಾರ ನಿರೀಕ್ಷೆಗೆ ತಕ್ಕಂತೆ ಚುನಾವಣೆಗೆ ಸಿದ್ಧತೆ ನಡೆಸಿಲ್ಲ ಎಂಬುದು ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯ ವರದಿಯಲ್ಲಿ ವ್ಯಕ್ತವಾಗಿದೆ.ಇದೇ ಸ್ಥಿತಿ ಮುಂದುವರಿದರೆ ಚುನಾವಣೆಯಲ್ಲಿ 70- 75 ಸ್ಥಾನಗಳ ಗಡಿ ದಾಟುವುದು ಕಷ್ಟವಾಗಬಹುದು ಎಂಬ ವರದಿ ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿದೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ, ಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸುವ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಭೇಟಿ ನೀಡಿ ಚುರುಕು ಮುಟ್ಟಿಸಿದ್ದಾರೆ.

ಆದರೆ, ಅದಕ್ಕೆ ತಕ್ಕಂತೆ ಬಿಜೆಪಿ ರಾಜ್ಯ ಘಟಕವಾಗಲಿ, ಸರ್ಕಾರದಲ್ಲಿರುವವರಾ

ಗಲಿ ಜನರ ಮಧ್ಯೆ ಹೋಗಿ ಪಕ್ಷದ ಪರವಾಗಿ ವಾತಾವರಣ ಸೃಷ್ಟಿಸುತ್ತಿಲ್ಲ ಎಂಬುದು ವರಿಷ್ಠರ ಚಿಂತೆಗೆ ಕಾರಣ ಎಂದು ಮೂಲಗಳು ಹೇಳಿವೆ.

ಈವರೆಗೆ ಪಕ್ಷ, ಸ್ವತಂತ್ರ ಸಂಸ್ಥೆ ಹಾಗೂ ಅಮಿತ್‌ ಶಾ ಕಡೆಯಿಂದ ಸೇರಿ ಮೂರು ಸಮೀಕ್ಷೆಗಳು ನಡೆದಿವೆ. ಅವುಗಳ ಪ್ರಕಾರ, ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಸಮಬಲ ಕಂಡುಬರುತ್ತಿದೆ. ಜೆಡಿಎಸ್‌ ಕೂಡಾ ಗಣನೀಯ ಸಂಖ್ಯೆ ಸ್ಥಾನಗಳನ್ನು ಗೆಲ್ಲಲಿದ್ದು, ಪಕ್ಷೇತರರೂ ಕೆಲ ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ. ಇದೆಲ್ಲದರ ಕುರಿತಾಗಿನ ವಿಮರ್ಶೆ ಇಲ್ಲಿದೆ...ಪ್ರವೀಣ್ ರಾವ್...

Edited By : Somashekar
PublicNext

PublicNext

30/06/2022 07:42 pm

Cinque Terre

93.45 K

Cinque Terre

24