ನವದೆಹಲಿ:ಭಾರತದ ಚುನಾವಣೆ ಆಯೋಗ ಈಗ ರಾಷ್ಟ್ರಪತಿ ಚುನಾವಣೆಯ ದಿನಾಂಕವನ್ನ ಪ್ರಕಟಗೊಳಿಸಿದ್ದು, ಜುಲೈ-18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ-24 ರಂದು ಕೊನೆಗೊಳ್ಳಲಿದೆ. ಅದಕ್ಕೂ ಮೊದಲೇ ಜುಲೈ-18 ರಂದು ಚುನಾವಣೆ ನಡೆಯಲಿದೆ.
ಮುಖ್ಯ ಚುನಾವಣೆ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ, ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 4,809 ಮತದಾರರು ಮತ ಚಲಾಯಿಸಲಿದ್ದು,ಯಾವುದೇ ಪಕ್ಷವೂ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡೋವಂತಿಲ್ಲ ಅಂತಲೂ ರಾಜೀವ್ ಕುಮಾರ್ ವಿವರಿಸಿದ್ದಾರೆ.
PublicNext
09/06/2022 03:48 pm