ನವದೆಹಲಿ: 17 ವರ್ಷದ ಯುವಕನನ್ನು ಭಾರತದ ಭೂಪ್ರದೇಶದಿಂದ ಅಪಹರಣ ಮಾಡಲಾಗಿದೆ ಎಂದು ಸಂಸದ ತಾಪಿರ್ ಗಾವೊ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಗೆ ಗಡಿ ದಾಟಿ ಬಂದಿದ್ದ 17 ವರ್ಷದ ಮಿರಾಮ್ ತರುಣ್‌ನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಮಂಗಳವಾರ ಅಪಹರಿಸಿದೆ. ಇದನ್ನು ಪೂರ್ವ ಅರುಣಾಚಲ ಪ್ರದೇಶದ ಸಂಸದ ತಾಪಿರ್ ಗಾವೊ ಅವರು ಬುಧವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಿಂದ ಮಂಗಳವಾರ ಯುವಕನನ್ನು ಅಪಹರಿಸಲಾಗಿದೆ. ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸ್ಥಳದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯುವಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಹೇಳಿದ್ದಾರೆ.
ಗಾವೋ ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತೀಯ ಸೇನೆಯನ್ನು ಟ್ಯಾಗ್ ಮಾಡಿದ್ದಾರೆ. ಘಟನೆಯ ಬಗ್ಗೆ ಗೃಹ ಸಚಿವಾಲಯಕ್ಕೆ ತಿಳಿಸಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿರುವುದಾಗಿ ಸಂಸದರು ಹೇಳಿದ್ದಾರೆ.
PublicNext
20/01/2022 08:10 am