ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದಾರೆ.
ಭಾಷಣದ ಪ್ರಮುಖ ಅಂಶಗಳು:
* 100 ಕೋಟಿ ಲಸಿಕೆ ಗುರುತು ಕೇವಲ ಸಂಖ್ಯೆಯಲ್ಲ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯ, ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ.
* ಆರಂಭದಲ್ಲಿ ನಮ್ಮ ಲಸಿಕೆ ಅಭಿಯಾನದ ಬಗ್ಗೆ ಆತಂಕವಿತ್ತು. ಆದರೆ ಈ ಆತಂಕವನ್ನು ನಮ್ಮ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ದೇಶದ ಜನರು ದೂರ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದರು.
* ಭಾರತದ ಲಸಿಕೆ ಅಭಿಯಾನವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್'ನ ಜೀವಂತ ಉದಾಹರಣೆಯಾಗಿದೆ.
* ಲಸಿಕೆ ಕಾರ್ಯಕ್ರಮದಲ್ಲಿ ವಿಐಪಿ ಸಂಸ್ಕೃತಿಯು ಕಾಣಿಸಲಿಲ್ಲ. ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ನಾವು ಖಚಿತಪಡಿಸಿದ್ದೇವೆ.
* ಕಳೆದ ದೀಪಾವಳಿ ವೇಳೆಗೆ ಆತಂಕವಿತ್ತು, ಈ ದೀಪಾವಳಿ ವೇಳೆಗೆ ನಮ್ಮೊಂದಿಗೆ 100 ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳ ವಿಶ್ವಾಸವಿದೆ. ನಾವು ಹಿಂದೆ ವಿದೇಶಗಳ ಉತ್ಪನ್ನಗಳ ಬಗೆಗೆ ಆಕರ್ಷಿತರಾಗುತ್ತಿದ್ದೆವು. ಆದರೆ, ಈಗ ದೇಶೀಯವಾಗಿ ಸಾಕಷ್ಟು ಉತ್ತಮ ತಯಾರಿಕೆ ನಡೆಯುತ್ತಿದೆ. ಎಲ್ಲರೂ ದೇಶೀಯ ವಸ್ತುಗಳನ್ನು ಖರೀದಿಸಿ, ಅದರಿಂದ ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಗೆ ಸಹಾಯವಾಗುತ್ತದೆ.
PublicNext
22/10/2021 10:02 am