ಕೊಲ್ಕತ್ತಾ: ತೈಲ ಬೆಲೆ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆ ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇ ಬೈಕ್ ಹತ್ತುವ ಮೂಲಕ ವಿಭಿನ್ನ ಪ್ರತಿಭಟನೆ ನೆಡೆಸಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸಿದ ದಿದಿ ಗಮನಸೆಳೆದಿದ್ದಾರೆ. ಕೊಲ್ಕತ್ತಾ ಮೇಯರ್ ಫರೀದ್ ಹಕೀಮ್ ಅವರು ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ನ ಹಿಂಬದಿ ಕುಳಿತು, ಬೆಲೆ ಏರಿಕೆ ವಿರೋಧಿ ಫಲಕ ಹಿಡಿದು ನಬಣ್ಣ (ಸರ್ಕಾರದ ಕಾರ್ಯಾಲಯ)ಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಿ ಸುಮಾರು ಐದು ಕಿ.ಮೀ ದೂರ ಅವರು ಹೀಗೆ ಪ್ರಯಾಣಿಸಿದ್ದು, ರಸ್ತೆಯಲ್ಲಿ ಜನರಿಗೆ ಕೈಬೀಸಿದರು. ತೈಲ ಬೆಲೆ ಕೆಲವು ರಾಜ್ಯಗಳಲ್ಲಿ ನೂರರ ಗಡಿ ದಾಟಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳವು ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ವ್ಯಾಟ್ ಅನ್ನು ₹1 ಇಳಿಸಿದೆ.
PublicNext
25/02/2021 01:18 pm