ಅದು ಬಂಡಾಯದ ನಾಡು, ಆ ನಾಡಿನಲ್ಲಿ ಇಂದು ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ರೈತರು ಆಗಮಿಸಿದ್ದಾರೆ. ಇಂತಹ ವೇಳೆಯಲ್ಲಿ ದೊಡ್ಡದೊಂದು ಹೈಡ್ರಾಮಾ ನಡೆದು ಹೋಗಿದೆ. ಹೌದು ಸಚಿವ ಸಿ ಸಿ ಪಾಟೀಲ್ ಬೆಂಬಲಿಗರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ರೈತರ ನಡುವೆ ನುಗ್ಗಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಸ್ಥಿತಿಗೆ ಹೋದಾಗ ಪೊಲೀಸರು ಮದ್ಯ ಪ್ರವೇಶ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ್ರು.
ನರಗುಂದ ಪಟ್ಟಣಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. 1980 ರಲ್ಲಿ ಸರ್ಕಾರಕ್ಕೆ ಕರ ನೀಡುವದಿಲ್ಲ ಎಂದು ಹೋರಾಟ ಮಾಡುವಾಗ ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕ ನರಗುಂದ ಗ್ರಾಮದ ವೀರಪ್ಪ ಕಡ್ಲಿಕೊಪ್ಪ ಹುತಾತ್ಮರಾದ್ರು. ಅಂದಿನಿಂದ 42ನೇ ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಆದ್ರೆ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು ಬಳಿ ದೊಡ್ಡದೊಂದು ಹೈಡ್ರಾಮಾ ನಡೆಯಿತು.
ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹಾಗೂ ಅವರ ಬೆಂಬಲಿಗರು ಮಾಲಾರ್ಪಣೆ ಮಾಡಲು ಬಂದಿದ್ದರು. ಈ ವೇಳೆ ಸಚಿವ ಸಿ ಸಿ ಪಾಟೀಲ್ ಬೆಂಬಲಿಗರು ಪಾಟೀಲ್ ಪಾಟೀಲ್ ಸಿ ಸಿ ಪಾಟೀಲ್ ಅಂತಾ ಘೋಷಣೆ ಹಾಕಿದ್ರು. ಈ ವೇಳೆ ರೈತರು ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಮಾಲಾರ್ಪಣೆ ಅವಕಾಶ ಮಾಡಿಕೊಡಬಾರದು ಎಂದು ಪಟ್ಟು ಹಿಡಿದರು.
PublicNext
21/07/2022 07:42 pm