ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಕಾಲೇಜಿನಲ್ಲಿ ವಿಧಾನಸಭೆ ಅಧಿವೇಶನ-ಇದು ರಿಯಲ್ ಅಲ್ಲ-ಅಣಕು !

ವರದಿ- ಸಂತೋಷ ಬಡಕಂಬಿ

ಅಥಣಿ - ಅಧಿವೇಶನದುದ್ದಕ್ಕೂ ಆಡಳಿತ ಮತ್ತು ವಿರೋಧ ಪಕ್ಷ ಗಳ ಪರಸ್ಪರ ಆರೋಪ, ಪ್ರತ್ಯಾರೋಪ, ಕೆಸರೆರಚುವಿಕೆ, ಟೀಕೆ, ಪ್ರತಿಭಟನೆ, ಸಭಾತ್ಯಾಗ ಮತ್ತು ಗದ್ದಲಗಳು. ಇದು ನಡೆದಿರೊಂದು ಅಥಣಿಯ ಶ್ರೀ‌ ಕೆ. ಎ.‌ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಜರುಗಿದ ಅಣುಕು ವಿಧಾನಸಭೆ ಅಧಿವೇಶನ ಕಾರ್ಯಕ್ರಮದಲ್ಲಿ.

ಆರಂಭದಲ್ಲಿ ಸಭಾಧ್ಯಕ್ಷರು, ಮುಖ್ಯಮಂತ್ರಿ, ಪ್ರತಿ ಪಕ್ಷದ ನಾಯಕರು, ಗೃಹ, ಶಿಕ್ಷಣ ಸೇರಿದಂತೆ ಸಚಿವರ ಆಯ್ಕೆ ಪ್ರಕ್ರಿಯೆ ನಡೆಯಿತು. ಮೊದಲಿಗೆ ತಾತ್ಕಾಲಿಕವಾಗಿ ನಾಲ್ಕಾರು ಸಚಿವರು ಶಾಸಕರು ತಮ್ಮ ಪರಿಚಯ ಮಾಡಿಕೊಂಡು ಅಧಿಕಾರ ಪ್ರಮಾಣವಚನ ಸ್ವೀಕರಿಸಿದರು. ನಂತರ ನೇರವಾಗಿ ಕಲಾಪಕ್ಕೆ ಮುಂದಾದರು.

ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಕುಳಿತಿದ್ದರು. ಸಭಾಧ್ಯಕ್ಷರು ಕಾರ್ಯಕಲಾಪ ಆರಂಭಿಸಿದರು. ನಿಧನ ಹೊಂದಿದ ಹಲವು ಗಣ್ಯರಿಗೆ ಸಂತಾಪ ಸೂಚನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ. ಹೀಗೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನೇ ಇಲ್ಲೂ ಮರು ಸೃಷ್ಟಿಸಿದರು. ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ಸರಿಸಮಾನವಾಗಿ ವಿರೋಧ ಪಕ್ಷಗಳ ಸದಸ್ಯರು ಪ್ರಶ್ನೆಗಳನ್ನು ಕೇಳಿ ಸರ್ಕಾರದಿಂದ ಉತ್ತರ ಪಡೆದರು.

ವಿಶೇಷವಾಗಿ ಅಥಣಿ ಜೊಡಿ ಕರೆಯ ನಿರ್ಮಾಣ, ಅಥಣಿ ಬೈ ಪಾಸ್ ರಸ್ತೆಯ ನಿರ್ಮಾಣ, ಅಮ್ಮಾಜೇಶ್ವರಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆ, ಅಥಣಿಯಲ್ಲಿ ಸರಕಾರಿ ಪ್ರೌಢ ಶಾಲೆಗಳ ನಿರ್ಮಾಣ, ಅಥಣಿಯ ಟ್ರಾಫಿಕ್ ಸಮಸ್ಯೆ, ಅಥಣಿ ರೈಲ್ವೆ ನಿರ್ಮಾಣ, ಕೊಕಟನೂರ ಪಶುವೈದ್ಯಕೀಯ ಕಾಲೇಜು ಕುರಿತಾದ ಪ್ರಶ್ನೆಗಳು, ಅಥಣಿ ಪುರಸಭೆಯನ್ನು ನಗರ ಸಭೆ ಮಾಡುವುದರ ಕುರಿತು, ಅಥಣಿ ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರ ಕುರಿತು ಮಸೂದೆ ಮಂಡನೆ ಕುರಿತಾದ ಪ್ರಶ್ನೆಗಳು ಪ್ರಶ್ನೆಗಳು ಗಮನಸೆಳೆದವು, ನಿಜಕ್ಕೂ ನೋಡುಗರಿಗೆ ತಾವು ವಿಧಾನಸಭೆಯಲ್ಲಿ ಕುಳಿತು ಅನುಭವವನ್ನ ಮೂಡಿಸುವುದರಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದರು.

ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್ ಎಸ್ ಕಟಗೇರಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಲವಾರು ದಿನಗಳಿಂದ ಅಣುಕು ವಿಧಾನಸಭೆಯ ಮಾದರಿಯನ್ನು ಮನದಟ್ಟು ಮಾಡುವಂತೆ ತರಬೇತಿ ನೀಡಿದ್ದೇವು ವಿಶೇಷವಾಗಿ ವಿದ್ಯಾರ್ಥಿಗಳು ಅದರ ಅರಿವು ಮೂಡಿಸಿಕೊಂಡು ಬರುವ ದಿನಮಾನದಲ್ಲಿ ಉತ್ತಮ ಆಡಳಿತಗಾರರಾಗಿ ನಾಡಿನಲ್ಲಿ ಹೊರಹೊಮ್ಮಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಅಣಕು ಸ‌ಂಸತ್ತಿನ ಕಲಾಪಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ ಹಾಗೂ ಅರವಿಂದರಾವ ದೇಶಪಾಂಡೆ ಸಾಕ್ಷಿಯಾದರು. ಈ ವೇಳೆ ಆರ್ ಎಂ ದೇವರಡ್ಡಿ, ಜಿ ಎಂ ಕುಲಕರ್ಣಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್ ಎಸ್ ಕಟಗೇರಿ, ರಾಮಚಂದ್ರ ನಾಯಿಕ, ಎನ್ ಬಿ ಝರೆ, ಬಿ ಪಿ ಗುಂಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

17/07/2022 01:56 pm

Cinque Terre

85.85 K

Cinque Terre

5