ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ದಲಿತ ವಿದ್ಯಾರ್ಥಿನಿ ಓದಿಗೆ 1 ಲಕ್ಷ ರೂ. ನೀಡಿದ ಜಗಳೂರು ಶಾಸಕ

ದಾವಣಗೆರೆ: ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದ ದಲಿತ ಯುವತಿ ವಿದ್ಯಾಭ್ಯಾಸಕ್ಕೆ ಶಾಸಕ ಎಸ್.ವಿ.ರಾಮಚಂದ್ರಪ್ಪ ನೆರವಾಗಿದ್ದಾರೆ. 1 ಲಕ್ಷ ರೂಪಾಯಿ ನೀಡಿದ ಅವರು ಆಕೆ ಎಂಬಿಬಿಎಸ್ ಓದುವರೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ದಲಿತ ಕುಟುಂಬದ ಹನುಮಂತಪ್ಪ ಹಾಗೂ ಪತ್ನಿ ನಾಗರತ್ನ ಅವರ ಪುತ್ರಿ ಅಕ್ಷತಾಳಿಗೆ ಸರ್ಕಾರಿ ಎಂಬಿಬಿಎಸ್ ಸರ್ಕಾರಿ ಮೆಡಿಕಲ್ ಸೀಟು ಸಿಕ್ಕಿದೆ‌. ಈ ಹಿನ್ನೆಲೆಯಲ್ಲಿ ಜಗಳೂರು ಶಾಸಕರೂ ಆದ ಶ್ರೀ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷ ಎಸ್ ವಿ.ರಾಮಚಂದ್ರಪ್ಪ ರವರು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಒಂದು ಲಕ್ಷ ರೂಪಾಯಿಗಳನ್ನ ನೀಡಿದರು.

ಈ ವೇಳೆ‌ ಮಾತನಾಡಿದ ಅವರು, ದಲಿತ ಸಮುದಾಯದ ಯುವತಿ ಈ ರೀತಿಯಲ್ಲಿ ಓದಿ ಸರ್ಕಾರಿ ಮೆಡಿಕಲ್ ಸೀಟು ಪಡೆದಿರುವುದು ಖುಷಿಯ ವಿಚಾರ. ಈಗ ಒಂದು ಲಕ್ಷ ರೂಪಾಯಿ ವಿದ್ಯಾಭ್ಯಾಸಕ್ಕಾಗಿ ಸಹಾಯವಾಗಿ ನೀಡಿದ್ದೇನೆ. ಮತ್ತೆ ಏನಾದರು ಸಹಾಯ ಬೇಕಾದರೆ ಖಂಡಿತವಾಗಿಯೂ ಮಾಡುತ್ತೇನೆ ಎಂದು ಭರವಸೆ ನೀಡಿದರು.

Edited By : Vijay Kumar
PublicNext

PublicNext

12/04/2022 10:00 am

Cinque Terre

119.1 K

Cinque Terre

4

ಸಂಬಂಧಿತ ಸುದ್ದಿ