ಹುಬ್ಬಳ್ಳಿ: ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಕಂಪ್ಲೀಟ್ ಚಿತ್ರ ಬದಲಾವಣೆ ಆಗಿದೆ. ಮತ್ತೇ ಇಲ್ಲಿ ಪ್ರವೇಶ ತೆಗೆದುಕೊಳ್ಳಬೇಕೆಂದು ಅನಿಸುತ್ತಿದೆ. ಎದೆ ತುಂಬಿ ಬರುತ್ತಿದೆ. ಮಾತುಗಳು ಬರತ್ತಾ ಇಲ್ಲ. ಎಲ್ಲ ರಂಗದಲ್ಲಿ ಮಾತನಾಡಿದ್ದೇನೆ. ನನ್ನ ಸರಸ್ವತಿ ದೇಗುಲದಲ್ಲಿ ಮಾತನಾಡುವುದು ಕಷ್ಟ. ಎಲ್ಲ ನೆನಪು ಒಟ್ಟಿಗೆ ಬಂದಿವೆ ಎಂದು ಬಸವರಾಜ ಬೊಮ್ಮಾಯಿಯವರು ತಮ್ಮ ವಿದ್ಯಾರ್ಥಿ ಜೀವನ ನೆನೆದು ಭಾವುಕರಾಗಿದ್ದಾರೆ.
ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟನೆ ವೇಳೆ ಮಾತನಾಡಿದ ಅವರು, ಈ ಕಾಲೇಜು ಜ್ಞಾನ ಕೊಟ್ಟಿದೆ. ಇಲ್ಲಿ ಎಲ್ಲ ನೆನಪುಗಳು ಹಾಗೇ ಇವೆ. ಅಚ್ಚಳಿಯದೇ ಉಳಿದಿದೆ. ನಾವು ಕಾಲೇಜ್ ಬಿಟ್ಟು ಹೋಗುವ ಸಂದರ್ಭದಲ್ಲಿ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಅನುಭವ ಆಗಿದೆ ಎಂದು ಭಾವುಕರಾಗಿ ನುಡಿದರು.
ರಾಜಕಾರಣಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈ ಹಿಂದೆ ಜಲ ಸಂಪನ್ಮೂಲ ಸಚಿವರಾದ ಸಂದರ್ಭದಲ್ಲಿ ಬಂದಿದ್ದೇನೆ ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಬಂದಿದ್ದೆ. ಆದರೆ ಯಾವತ್ತೂ ಅಂದುಕೊಂಡಿರಲಿಲ್ಲ ನಾನು ಸಿಎಂ ಆಗುತ್ತೇನೆ ಎಂದು ಅವರು ಹೇಳಿದರು.
ಇನ್ನೂ ಇದೇ ಸಂದರ್ಭದಲ್ಲಿ ತಮ್ಮ ಕಾಲೇಜಿನ ದಿನಗಳನ್ನು ಮೆಲುಕು ಹಾಕುವ ಮೂಲಕ ಎಲ್ಲ ವಿಭಾಗದಲ್ಲಿ ತಮ್ಮ ಸಂತಸದ ಸಂಗತಿಯನ್ನು ನೆನೆದು ಎಲ್ಲರ ಮುಖದಲ್ಲಿ ನಗೆಯನ್ನು ಹುಟ್ಟು ಹಾಕಿದರು.
PublicNext
27/09/2021 11:49 am