ಬೆಂಗಳೂರು: ಇಂದು ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಕಟಪೂರ್ವ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾನು ಕೊರೊನಾ ನಡುವೆಯೂ ಹಠಕ್ಕೆ ಬಿದ್ದು, ಪ್ರತಿಷ್ಟೆಗಾಗಿ ಪರೀಕ್ಷೆ ಮಾಡಿಲ್ಲ ಎಂದಿದ್ದಾರೆ
ನಾವು ಅಂದುಕೊಂಡ ಹಾಗೇ ಇವತ್ತು ಫಲಿತಾಂಶ ಪ್ರಕಟವಾಗುತ್ತಿದೆ. ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ. ಈ ಸಲ ವಿಶೇಷ ವಿಧಾನದಲ್ಲಿ ಮಕ್ಕಳ ಪರೀಕ್ಷೆ ಮಾಡಿದ್ದೇವೆ. ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಪರೀಕ್ಷೆ ಮಾಡಿದ್ದೇವೆ. ಇದರ ಹೊರತಾಗಿ ನನ್ನ ಪ್ರತಿಷ್ಟೆ ಅಥವಾ ಯಾವುದೇ ಹಠ ಇರಲಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಪರೀಕ್ಷೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಪರೀಕ್ಷೆ ಸಮಯದಲ್ಲಿ ನನ್ನ ಮೇಲೆ ಅನೇಕ ವಿರೋಧಗಳು ಕೇಳಿ ಬಂದಿದ್ದವು. ಆದರೂ ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದೇವೆ. ನನಗೆ ಪರೀಕ್ಷೆ ನಡೆಸಿದ ಸಮಾಧಾನ ಇದೆ ಎಂದರು.
PublicNext
09/08/2021 12:52 pm