ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕದಲ್ಲಿ ಹೊಸ ಶೈಕ್ಷಣಿಕ ವ‍ರ್ಷ ಅಕ್ಟೋಬರ್ ನಿಂದ ಆರಂಭ: ಅಶ್ವತ್ಥನಾರಾಯಣ

ಬೆಂಗಳೂರು: "2020-21 ಮತ್ತು 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿವಿಧ ಕಾರ್ಯಕ್ರಮಗಳ ಡ್ರ್ಯಾಫ್ಟ್‌ ಕ್ಯಾಲೆಂಡರ್‌ ಅನ್ನು ಸಿದ್ಧಪಡಿಸಲಾಗಿದೆ. ಕೊರೊನಾ ಹಿನ್ನೆಲೆಯ ಪರಿಸ್ಥಿತಿಗಳನ್ನು ಪರಿಗಣಿಸಿ ಕಾರ್ಯಕ್ರಮಗಳನ್ನು ಸೂಚಿಸಲಾಗಿದೆ. ಯುಜಿಸಿಯ ಷರತ್ತಿನ ಪ್ರಕಾರ ಸೆಮಿಸ್ಟರ್‌ಗೆ ಶೇಕಡ.90 ಕರ್ತವ್ಯ ದಿನಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ," ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಜತೆಗೆ, "ಕರ್ತವ್ಯಕ್ಕೆ ಪ್ರತಿವಾರದ 6 ದಿನಗಳ ಪ್ರಕಾರ ಗಣನೆಗೆ ತೆಗೆದುಕೊಂಡು ಪ್ಲಾನ್‌ ಮಾಡಲಾಗಿದೆ. ಹೈದೆರಾಬಾದ್ ಕರ್ನಾಟಕದ ವಿವಿಗಳು ಈ ಬೇಸಿಗೆಯಲ್ಲಿ ಬಿರುಬಿಸಿಲಿನ ತಾಪವನ್ನು ಎದುರಿಸಲಿವೆ. ಇವುಗಳು ದಿನಾಂಕವನ್ನು ಸ್ವಲ್ಪ ಮುಂದೂಡಬಹುದು." ಈ ಕರಡು ಅಂಶಗಳನ್ನು ಎಲ್ಲಾ ಕುಲಪತಿಗಳು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆ ನೀಡಿದ ನಂತರ ಅಂತಿಮಗೊಳಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಈ ಹಿಂದಿನ ಕೊರೊನಾ ಪೂರ್ವ ಶೈಕ್ಷಣಿಕ ವೇಳಾಪಟ್ಟಿಗೆ ಮರಳಲು ಇನ್ನೂ ಎರಡು ವರ್ಷಗಳು ಬೇಕು ಎಂದು ಕುಲಪತಿಗಳು ಅಭಿಪ್ರಾಯ ಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

20/01/2021 05:50 pm

Cinque Terre

52.87 K

Cinque Terre

1

ಸಂಬಂಧಿತ ಸುದ್ದಿ