ಬೆಂಗಳೂರು: ನಮ್ಮ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಅತೀ ಮುಖ್ಯವಾಗಿದೆ.
ಹಾಗಾಗಿ ಹಿರಿಯ ರಾಜಕಾರಣಿ ಮತ್ತು ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಚಮರಾಜ ನಗರ ಲೋಕಸಭಾ ಕ್ಷೇತ್ರದ ಪದವಿ ಪೂರ್ವ ಕಾಲೇಜಿನ ಸುಮಾರು 12,000 ವಿದ್ಯಾರ್ಥಿಗಳಿಗೆ 'ಸಂವಿಧಾನ ಓದಿ' (ಸಂವಿಧಾನದ ಪುಸ್ತಕ) ಪುಸ್ತಕ ವಿತರಿಸಲಿದ್ದಾರೆ.
ಈ ಪುಸ್ತಕಗಳ ಮುದ್ರಣಕ್ಕೆ ಸಂಸದರ ನಿಧಿ ಬಳಸಿಕೊಳ್ಳುವುದಾಗಿ ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ.
ಆರು ಬಾರಿ ಸಂಸದರಾಗಿರುವ ಶ್ರೀನಿವಾಸ್ ಪ್ರಸಾದ್ ಅವರು, ಈ ಹಿಂದೆ ಸಂಸದರ ನಿಧಿಯ ಹಣವನ್ನು ಎಲ್ಲಾ ತಾಲ್ಲೂಕುಗಳಲ್ಲೂ ಅತ್ಯುತ್ತಮ ಮೂಲಸೌಕರ್ಯ, ಓದುವ ಕೋಣೆ ಮತ್ತು ಗ್ರಂಥಾಲಯ ಹೊಂದಿದ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಬಳಸಿಕೊಂಡಿದ್ದರು.
ಅಂಬೇಡ್ಕರ್ ಭವನಗಳನ್ನು ಈಗ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಮತ್ತು ವಿವಾಹ ಸಮಾರಂಭ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
PublicNext
16/01/2021 08:57 pm