ನವದೆಹಲಿ: 'ಕೇಸರಿಗೆ ಅವಮಾನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತೆ' ಎಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ಹಿಂದೂ ಸೇನಾ ಸಂಘಟನೆ ಬ್ಯಾನರ್‌ಗಳು ಹಾಗೂ ಧ್ವಜಗಳನ್ನು ಹಾಕಿದೆ.
ಇತ್ತೀಚೆಗೆ ರಾಮನವಮಿ ವೇಳೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿತ್ತು. ಈ ಘಟನೆಯಿಂದ ಕೆರಳಿರುವ ಹಿಂದೂ ಸಂಘಟನೆಗಳು ಈ ರೀತಿ ಎಚ್ಚರಿಕೆ ನೀಡಿವೆ. ಈ ಬಗ್ಗೆ ಸಂಘಟನೆಯ ಮುಖ್ಯಸ್ಥ ವಿಷ್ಣು ಗುಪ್ತ ಮಾತನಾಡಿದ್ದು, ಭಗವಾ (ಕೇಸರಿ) ಜೆಎನ್ ಯು ಎಂದು ಬರೆದಿರುವ ಪೋಸ್ಟರ್ ನ್ನು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಜೆಎನ್ ಯು ಕ್ಯಾಂಪಸ್ ನಲ್ಲಿ ನಿರಂತರವಾಗಿ ಕೇಸರಿಯನ್ನು ಅವಮಾನ ಮಾಡಲಾಗುತ್ತಿದೆ. ನಿಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಿ, ನಾವು ಇದನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ವಾಟ್ಸ್ ಆಪ್ ಗ್ರೂಪ್ ನಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋದಲ್ಲಿ, ಎಚ್ಚರಿಕೆ ನೀಡಲಾಗಿದೆ.
PublicNext
15/04/2022 03:31 pm