ಗದಗ : ರಾಜ್ಯದಲ್ಲಿ ಹಿಜಾಬ್ ಗದ್ದಲ ಜೋರಾಗಿದೆ. ಮಕ್ಕಳು ಶಾಲೆಯಲ್ಲಿ ಹಿಜಾಬ್ ಬೇಕೆ ಬೇಕು ಎಂದು ಹಠ ಹಿಡಿದಿದ್ದಾರೆ. ಇದರ ಮಧ್ಯೆ ಮಕ್ಕಳಿಗೆ ಬುದ್ದಿ ಹೇಳಬೇಕಿದ್ದ ಪಾಲಕರು ಹಿಜಾಬ್ ಬೇಕು ಎಂದು ಹಠ ಹಿಡಿದ ಮಕ್ಕಳಿಗೆ ಸಾಥ್ ನೀಡಿದ್ದಾರೆ.
ಹೌದು ಗದಗ ಜಿಲ್ಲೆಯ ಸರ್ಕಾರಿ ಉರ್ದು ಶಾಲೆಯಲ್ಲಿ ಹಿಜಾಬ್ ಜಟಾಪಟಿ ನಡುವೆಯೇ ಕ್ಲಾಸಿಗೆ ಎಂಟ್ರಿ ಕೊಟ್ಟ ಪೋಷಕರು ಹಿಜಾಬ್ ಧರಿಸಿ ಕ್ಲಾಸಿನಲ್ಲಿ ಕುಳಿತಿದ್ದ ಮಕ್ಕಳನ್ನ ಹೊರ ತಂದು ಶಿಕ್ಷಕರೇ ಹೊರಕಳಿಸಿದ್ದಾರೆಂದು ಆರೋಪ ಮಾಡಿದ್ದಾರೆ.
ಹಿಜಾಬ್ ಬೇಕು ಬೇಡ ಎನ್ನುವ ಗೊಂದಲ ಬೇಡ ಎಂದು ಮಕ್ಕಳನ್ನು ಕ್ಲಾಸ್ ನಿಂದ ಹೊರತಂದ ಪೋಷಕರು ಶಾಲೆ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದರು.
PublicNext
15/02/2022 07:55 pm