ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೂ ಹಿಜಾಬ್ ಹೋರಾಟ ಭುಗಿಲೆದ್ದಿದೆ. ಸ್ಥಳೀಯ ಜನಪ್ರತಿನಿಧಿಗಳು ಒಮ್ಮತದಿಂದ ಹಿಜಾಬ್ ಪರವಾಗಿ ಇಂದು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು ಎಂದಿದ್ದಾರೆ. ಹಾಗೂ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಎಐಎಂಐಎಂ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯೆ ರೇಷ್ಮಾ ಬೈರಕ್‌ದಾರ್, ಹಿಜಾಬ್ ಧರಿಸುವುದು ನನ್ನ ಹಕ್ಕು. ನನ್ನ ಮುತ್ತಜ್ಜಿ, ಅಜ್ಜಿ ಕೂಡ ಹಿಜಾಬ್ ಹಾಕಿದ್ದರು. ನಾನು ಕೂಡ ಹಾಕಿದ್ದೇನೆ. ಆಗ ಏನೂ ಸಮಸ್ಯೆ ಇರಲಿಲ್ಲ ಈಗ ಯಾಕೆ ಸಮಸ್ಯೆ ಬಂತು? ಸರ್ಕಾರ ಯೋಚಿಸುವುದಾರೆ ಸೂರು ಇಲ್ಲದವರ ಬಗ್ಗೆ ಹಸಿವಿನಿಂದ ನರಳುವವರ ಬಗ್ಗೆ, ಬಡತನ ನಿರ್ಮೂಲನೆ ಬಗ್ಗೆ ಯೋಚಿಸಬೇಕು. ಅದು ಬಿಟ್ಟು ಮಹಿಳೆಯರ ಬಟ್ಟೆ ಬಗ್ಗೆ ಮಾತನಾಡುವುದು ಒಪ್ಪಿತವಲ್ಲ ಎಂದಿದ್ದಾರೆ.
PublicNext
07/02/2022 03:28 pm