ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ ಕಂಡಿರುವುದು ಆತಂಕಕಾರಿ. ಆದ್ರೆ ಈ ಸಮೀಕ್ಷೆಯ ವಿಧಾನ ಅವೈಜ್ಞಾನಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಾರ್ಷಿಕ ವರದಿ ತಯಾರಿಸಲು ಮತ್ತು ಲೆಕ್ಕಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಇದು ಎಫ್ಎಒ (ಯುಎನ್ನ ಆಹಾರ ಮತ್ತು ಕೃಷಿ ಸಂಸ್ಥೆ) ವರದಿ ತಯಾರಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಅವರು ನಾಲ್ಕು ಪ್ರಶ್ನೆಯ ಒಪಿನಿಯನ್ ಪೋಲ್ ಮೂಲಕ ಈ ವರದಿ ತಯಾರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ವಿಧಾನದಲ್ಲಿ ಅಪೌಷ್ಠಿಕತೆಯನ್ನು, ಆಹಾರ ಪದಾರ್ಥಗಳ ಲಭ್ಯತೆಯನ್ನು ಅಳೆಯುವುದು ಅಸಾಧ್ಯ. ವೈಜ್ಞಾನಿಕವಾಗಿ ಅಪೌಷ್ಠಿಕತೆ ಮಟ್ಟ ಅಳತೆ ಮಾಡಲು ವ್ಯಕ್ತಿಯ ತೂಕ ಮತ್ತು ಎತ್ತರ ಇತ್ಯಾದಿ ವಿಧಾನ ಅಗತ್ಯ ಇರುತ್ತದೆ. ಟೆಲಿಫೋನ್ ಮೂಲಕ ನಡೆಸಿರುವ ಈ ಗಣತಿ ಸರಿಯಲ್ಲ ಎಂದು ಹೇಳಲಾಗಿದೆ.
PublicNext
16/10/2021 08:13 am