ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ !

ನವದೆಹಲಿ:ಇವತ್ತು ಸಿಬಿಎಸ್‌ಸಿ 10 ಮತ್ತು 12 ತಗರಗತಿಯ ಫಲಿತಾಂಶ ಹೊರ ಬಿದ್ದಿದೆ. ಇದರ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ವಿದ್ಯಾರ್ಥಿಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ.

"ಕೆಲವು ವಿದ್ಯಾರ್ಥಿಗಳಿಗೆ ತಮ್ಮಗೆ ಬಂದ ಫಲಿತಾಂಶ ತೃಪ್ತಿ ತರದೇ ಇರಬಹುದು. ಆದರೆ, ಒಂದೇ ಒಂದು ಪರೀಕ್ಷೆ ವಿದ್ಯಾರ್ಥಿ ಯಾರೆಂದು ಎಂದಿಗೂ ವ್ಯಾಖ್ಯಾನಿಸೋದಿಲ್ಲ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಯಶಸ್ಸು ಕಾಣುತ್ತಾರೆ ಅನ್ನೋ ನಂಬಿಕೆ ನನಗಿದೆ" ಎಂದು ಮೋದಿ ಹೇಳಿದ್ದಾರೆ.

ಈ ವರ್ಷ ನಾವು ಪಿಪಿಸಿ ಸಹ ಹಂಚಿಕೊಂಡಿದ್ದೇವೆ. ನಾವು ಅಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳನ್ನೆ ಚರ್ಚಿಸಿದ್ದೇವೆ ಎಂದು ಕೂಡ ಹೇಳಿದರು.ಹಾಗೇನೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ವೀಡಿಯೋವನ್ನ ಕೂಡ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Edited By :
PublicNext

PublicNext

22/07/2022 05:01 pm

Cinque Terre

35.53 K

Cinque Terre

1