ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಹೇಶ-- ವಿಶೇಷ ಸಾಹಿತ್ಯ ಸಂವಾದ. ಪರಿಷತ್ ಅಧ್ಯಕ್ಷರೊಡನೆ ಮಾತು-ಮಂಥನ

ಬೆಂಗಳೂರು; ಶತಮಾನಗಳ ಇತಿಹಾಸವನ್ನು ಹೊಂದಿರುವ ಕನ್ನಡಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಭೌಮ ಸಂಸ್ಥೆ. ಸಾಹಿತ್ಯ ಪರಿಷತ್ತಿನ 26 ನೇ ಅಧ್ಯಕ್ಷರಾಗಿರುವವರು ನಾಡೋಜ ಡಾ ಮಹೇಶ ಜೋಷಿ ಹಿಂದೆ ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕರಾಗಿ ಚಂದನ ವಾಹಿನಿಯನ್ನು ಜನಪ್ರಿಯ ಗೊಳಿಸಿದ್ದವರು.

ನಿವೃತ್ತಿಯ ನಂತರ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಬಹಳ ದೊಡ್ಡ ಅಂತರದಿಂದ ಜಯಶೀಲರಾದವರು.

"ದೂರದರ್ಶನವನ್ನು ಸಮೀಪ ದರ್ಶನವಾಗಿಸಿದವನು ನಾನು. ಸಾಹಿತ್ಯ ಪರಿಷತ್ತನ್ನ ಜನಸಾಮಾನ್ಯರ ಪರಿಷತ್ತನ್ನಾಗಿಸುತ್ತೇನೆ "ಎಂಬ ಧ್ಯೇಯ ವಾಕ್ಯದೊಂದಿಗೆ ಅಧಿಕಾರಕ್ಕೆ ಬಂದ ಡಾ. ಜೋಷಿ ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಅನೇಕ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಇದಕ್ಕಾಗಿ ಬೈಲಾ ತಿದ್ದುಪಡಿಗೂ ಸರ್ವಸದಸ್ಯರ ಸಭೆಯಲ್ಲಿ ಒಪ್ಪಿಗೆಯನ್ನು ಪಡೆದಿದ್ದಾರೆ.

ಕನ್ನಡ ,ಕನ್ನಡಿಗ,ಕರ್ನಾಟಕ ಎಂಬ ಸೂತ್ರದಡಿ ಸಮಗ್ರ ನಾಡುನುಡಿಯ ಸೇವೆಗೆ ಮುನ್ನಡಿ ಇಟ್ಟಿದ್ದಾರೆ. ಬಹಳ ಮುಖ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ತಯಾರಿಯನ್ನು ಆರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಪ್ರತಿನಿಧಿ ಪ್ರವೀಣ ನಾರಾಯಣ ರಾವ್ ಅವರು ಡಾ. ಮಹೇಶ ಜೋಷಿಯವರೊಡನೆ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.

Edited By :
PublicNext

PublicNext

05/05/2022 06:00 pm

Cinque Terre

59.78 K

Cinque Terre

0

ಸಂಬಂಧಿತ ಸುದ್ದಿ