ಬೆಂಗಳೂರು : ನನ್ನ ಮೇಲೆ ರೇಡ್ ಬೇಸರವಿಲ್ಲ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ.
ಆದರೆ, ಮಗಳ ಮದುವೆಗೆ ತಂದ ಚಿನ್ನವನ್ನು ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು ಎಂದು ನಂಜಾವಧೂತ ಸ್ವಾಮೀಜಿ ಮುಂದೆ ಡಿ.ಕೆ ಶಿವಕುಮಾರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಮನೆ ಮೇಲೆ CBI ಅಧಿಕಾರಿಗಳ ದಾಳಿ ಬಳಿಕ ಇಂದು ನಂಜಾವಧೂತ ಶ್ರೀಗಳು ಶಿವಕುಮಾರ್ ರ ನಿವಾಸಕ್ಕೆ ಭೇಟಿಕೊಟ್ಟರು.
ಇದೇ ವೇಳೆ ಶಿವಕುಮಾರ್ ಜೊತೆ ಮಾತನಾಡಿದ ಶ್ರೀಗಳು ಕಳೆದ ವರ್ಷವೂ ನಿಮ್ಮ ವಿರುದ್ಧ ದಾಳಿ ಆಗಿದೆ. ED, IT ನೋಡಿದ್ದೀರಿ. ಒಳ್ಳೆಯದು ಆಗಬೇಕು ಅಂದ್ರೆ ಕಷ್ಟ ದಾಟಿಕೊಂಡು ಹೋಗಬೇಕು.
ಸ್ವಲ್ಪ ದಿನ ಕಷ್ಟ ಸಹಜ ಅಂತಾ ಡಿಕೆಶಿಗೆ ಧೈರ್ಯ ತುಂಬಿದರಂತೆ. ಆಗ, ಶಿವಕುಮಾರ್ ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಆಕ್ಟೀವ್ ಆಗಿದ್ದೇ ತಪ್ಪಾಯಿತು.
ಬಿಜೆಪಿ ಬೈ ಎಲೆಕ್ಷನ್ ಅಂತಾ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಎಲ್ಲವನ್ನೂ ನೋಡಿದ್ದೀನಿ.
ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟರು. ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಡಿಕೆ ಶಿವಕುಮಾರ್ ನಂಜಾವಧೂತ ಶ್ರೀಗಳ ಜೊತೆ ಚರ್ಚೆ ವೇಳೆ ಮಾಹಿತಿ ನೀಡಿದ್ದಾರೆ.
PublicNext
06/10/2020 11:17 am