ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರಿಂದ NSS ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು : ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2020-21 ನೇ ಸಾಲಿನ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಪ್ರಶಸ್ತಿಯನ್ನು ರಾಜ್ಯಪಾಲ ಶ್ರೀಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.

2 ಅತ್ಯುತ್ತಮ ವಿಶ್ವವಿದ್ಯಾಲಯ, 12 ಅತ್ಯುತ್ತಮ ಘಟಕ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಮತ್ತು 12 ಅತ್ಯುತ್ತಮ ಸ್ವಯಂಸೇವಕ/ಸೇವಕಿಯರಿಗೆ 2020-21 ನೇ ಸಾಲಿನ ರಾಜ್ಯ ಎನ್‌ಎಸ್ ಎಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಮಾತನಾಡಿ,ಎನ್ ಸಿಸಿ ನಲ್ಲಿ ಸೇವೆಯನ್ನು ಪರಿಗಣಿಸಿ ಅತ್ಯುತ್ತಮ ವಿಶ್ವವಿದ್ಯಾಲಯ, ಕಾರ್ಯಕ್ರಮ ಅಧಿಕಾರಿ ಹಾಗೂ ಸ್ವಯಂ ಸೇವಕ/ಸೇವಕಿಯರನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಎನ್ ಎಸ್ ಎಸ್ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಜವಾಬ್ದಾರಿಯನ್ನು ಎನ್ ಎಸ್ ಎಸ್ ಗೆ ನೀಡಲಾಗಿದೆ. ನಿಮ್ಹಾನ್ಸ್ ಮೂಲಕ ಎನ್ಎನ್ಎಸ್ ಸ್ವಯಂ ಸೇವಕರಿಗೆ ಕೌನ್ಸೇಲಿಂಗ್ ತರಬೇತಿ ನೀಡಲಾಗುತ್ತಿದೆ. ಸಮಾಜದ ಏಳಿಗೆಗೆ ಎನ್ ಎಸ್ ಎಸ್ ಕೊಡುಗೆ ತುಂಬ ದೊಡ್ಡದಿದೆ. ರಾಜ್ಯದ ಎಲ್ಲಾ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಇವರೆಲ್ಲ ಪ್ರೇರಣೆ ಆಗಬೇಕು ಎಂದು ಸಚಿವ ಡಾ‌.ನಾರಾಯಣಗೌಡ ಹೇಳಿದರು.

ದೇಶದಲ್ಲಿಯೇ ಮಾದರಿಯಾಗಿ ರಾಜ್ಯ ಎನ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸದ್ಯ ಐದು ಲಕ್ಷ ಸ್ವಯಂ ಸೇವಕರನ್ನು ಹೊಂದಿದ್ದು, ಈ ವರ್ಷ 10 ಲಕ್ಷಕ್ಕೆ ವಿಸ್ತರಿಸುವ ಗುರಿ ಹೊಂದಿದ್ದು, ಯಶಸ್ವಿಯಾಗಿ ಮುಟ್ಟುತ್ತೇವೆ ಎಂದು ಸಚಿವ ಡಾ.ನಾರಾಯಣಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

Edited By : Abhishek Kamoji
PublicNext

PublicNext

10/09/2022 03:41 pm

Cinque Terre

24.21 K

Cinque Terre

0