ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಡಿಜೆ ಗಾಗಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ

ಪಾವಗಡ: ತಾಲೂಕಿನ ವೈ ಎನ್ ಹೊಸಕೋಟೆ ಗ್ರಾಮದಲ್ಲಿ ವಿಶ್ವ ಹಿಂದೂ ಮಹಾ ಗಣಪತಿಯ ವತಿಯಿಂದ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಸರ್ಜನಾ ಕಾರ್ಯಕ್ರಮದಲ್ಲಿ ಡಿಜೆಗಾಗಿ ಕೆಲಕಾಲ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಸಮೀಪದಲ್ಲಿ ಆಡಳಿತದ ವಿರುದ್ಧ ಬೇಕೇ ಬೇಕು dj ಬೇಕು ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಉದ್ವಿಗ್ನ ವಾತಾವರಣವನ್ನು ನಿರ್ಮಾಣ ಮಾಡಿದ್ದರು,

ಇಂದು ಸಂಜೆ ಈ ಒಂದು ಘಟನೆ ನಡೆದಿದ್ದು, ಈ ಒಂದು ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು, ಬಳಿಕ ಪೊಲೀಸರು ಎಂದು ಕಾರ್ಯಕರ್ತರ ಮನ ಒಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಬಳಿಕ ಡ್ರಮ್ ಸೆಟ್ ಸದ್ದಿನಲ್ಲಿ ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಮೆರವಣಿಗೆ ನಡೆಸಿ ಉದ್ಯಾನಪ್ಪನ ಕುಂಟೆಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಕ್ಕತ್ ಟ್ರೆಂಡ್ ಆಗಿತ್ತು.

ವರದಿ ರಾಘವೇಂದ್ರ ದಾಸರಹಳ್ಳಿ,ಪಬ್ಲಿಕ್ ನೆಕ್ಸ್ಟ್,ತುಮಕೂರು.

Edited By : Nagesh Gaonkar
PublicNext

PublicNext

06/09/2022 10:44 pm

Cinque Terre

61.7 K

Cinque Terre

3