ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಡಾ||ಸಿದ್ದಗಂಗಾ ಶ್ರೀಗಳ ಅರ್ಥಪೂರ್ಣ 115ನೇ ಜಯಂತಿ & ಗುರುವಂದನಾ ಮಹೋತ್ಸವ

ತುಮಕೂರು: ಪರಮಪೂಜ್ಯ ಡಾ|| ಶ್ರೀ.ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತಿ & ಗುರುವಂದನಾ ಮಹೋತ್ಸವ ನಡೆಯಲಿದೆ. ನಾಡಿಗೆ ಒಳ್ಳೆಯ ಸಂದೇಶ ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀಗಳ ಬದುಕಿನಿಂದ ದೊರೆತಿರುವ ಪ್ರೇರಣೆಯ ಆಚರಣೆ ಇದಾಗಿದೆ. ಇಂದಿನ ಪೀಳಿಗೆಗೆ ಶ್ರೀಗಳ ವಿಚಾರ ತಿಳಿಸುವ ಅರ್ಥ ಪೂರ್ಣ ಕಾರ್ಯಕ್ರಮವಾಗಲಿದೆ. ಶ್ರೀಸಿದ್ಧಗಂಗಾ ಮಠದ ಶಿಕ್ಷಣ/ದಾಸೋಹ ಪರಂಪರೆ ಇಡೀ ದೇಶಕ್ಕೆ ಮಾದರಿಯಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಾರ್ಯಕ್ರಮದಲ್ಲಿ‌ ಪಾಲ್ಗೊಳ್ಳಲಿದ್ದಾರೆ. ದೊಡ್ಡ ಸಂಖ್ಯೆಲಿ ಭಕ್ತ ಸಮೂಹ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೂರ್ವಭಾವಿ ತಯಾರಿಗಳ ಬಗ್ಗೆ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ತಿಳಿಸಿದರು.

SureshBabu Public Next Bengaluru.

Edited By : Nagesh Gaonkar
PublicNext

PublicNext

01/04/2022 07:51 am

Cinque Terre

32.59 K

Cinque Terre

1

ಸಂಬಂಧಿತ ಸುದ್ದಿ