ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ತೆರವು ಕಾರ್ಯಾಚರಣೆ ವೇಳೆ ನಲಪಾಡ್ ವಾಗ್ವಾದ: ಪೊಲೀಸ್ ಅಧಿಕಾರಿಯೊಂದಿಗೆ ಚಕಮಕಿ

ಬೆಂಗಳೂರು: ಭೀಕರ ಮಳೆಯಿಂದ ರಾಜ್ಯ ರಾಜಧಾನಿಯ ಜನ ನಲುಗಿ ಹೋಗಿದ್ದಾರೆ. ಎಲ್ಲೆಂದರಲ್ಲಿ ನೀರು ನುಗ್ಗಲು ಕಾರಣ‌ ಆಗಿದ್ದೇ ಕೆರೆಗಳ ಒತ್ತುವರಿ. ಹೀಗಾಗಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಬಿಬಿಎಂಪಿ ಜೆಸಿಬಿ ಅಸ್ತ್ರ ಬಳಸಿದೆ.

ಇದರ ಭಾಗವಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಹ್ಯಾರಿಸ್ ಅವರ ಪುತ್ರ ಮಹ್ಮದ್ ನಲಪಾಡ್ ಅವರಿಗೆ ಸೇರಿದ್ದು ಎನ್ನಲಾದ ನಲಪಾಡ್ ಅಕ್ಯಾಡೆಮಿ ಕಟ್ಟಡವನ್ನು ತೆರವುಗಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ನಲಪಾಡ್ ನಡುವೆ ಮಾತಿನ ಚಕಮಕಿ ನಡೆದಿದೆ. ನೀವು ಮುಂಚಿತವಾಗಿ ನೋಟಿಸ್ ನೀಡದೇ ತೆರವು ಮಾಡಲು ಮುಂದಾಗಿದ್ದೀರಿ ಎಂಬುದು ನಲಪಾಡ್ ವಾದವಾಗಿದೆ.

ಈ ಹಿಂದೆಯೇ ಎರಡು ಬಾರಿ ನಲಪಾಡ್ ಅಕ್ಯಾಡೆಮಿ ಕಟ್ಟಡದ ಒತ್ತುವರಿ ಭಾಗವನ್ನು ತೆರವುಗೊಳಿಸಲು ಬಂದಾಗ ಇಲ್ಲಿನ ಸಿಬ್ಬಂದಿ ಹಾಗೂ ಕಾರ್ಯಕರ್ತರು ತಡೆದಿದ್ದಾರೆ. ಒತ್ತುವರಿ ಆಗಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಆದರೆ ಒತ್ತುವರಿ ಮಾಡಿಲ್ಲ ಎಂದು ಹೇಳಿದ್ದ ನಲಪಾಡ್ ಅವರು ಅದಕ್ಕೆ ಸಂಬಂಧಿಸಿದಂತೆ ನಮಗೆ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ನಾವು ಒತ್ತುವರಿ ತೆರವು ಮಾಡಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

14/09/2022 05:58 pm

Cinque Terre

122.26 K

Cinque Terre

18