ಅಥಣಿ : ಸ್ಥಳೀಯ ಸಮಸ್ಯೆ ಹೇಳಲು ಬಂದ ಮಹಿಳೆಗೆ ಅವಾಚ್ಯವಾಗಿ ನಿಂದನೆ ಮಾಡಿ, ಅಧಿಕಾರ ದುರುಪಯೋಗ ಪಡೆಸಿಕೊಂಡು ಎಫ್.ಐ.ಆರ್ ದಾಖಲು ಮಾಡಿಸಿದ ಶಾಸಕ ಅರವಿಂದ ಲಿಂಬಾವಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರು, ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮನಗೌಡ ಪರಗೊಂಡ, ಅಥಣಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಅಧ್ಯಕ್ಷ ಸಿದ್ದಾರ್ಥ ಸಿಂಗೆ ಅವರು ಅಥಣಿ ತಹಶಿಲ್ದಾರ ಮೂಲಕ ರಾಜ್ಯಪಾಲರು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಭೀಮನಗೌಡ ಪರಗೊಂಡ, ತಮ್ಮ ಬಳಿ ಸಮಸ್ಯೆ ಹೇಳಲು ಬಂದ ಮಹಿಳೆಗೆ ಮಾಜಿ ಸಚಿವರು ಹಾಗೂ ಮಹದೇವಪುರ ಮತಕ್ಷೇತ್ರದ ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ನಿಂದಿಸಿ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಆ ಮಹಿಳೆಯ ವಿರುದ್ಧ ಪೊಲೀಸ್ ಅಧಿಕಾರಿಗಳ ಮೂಲಕ ಎಫ್. ಐ. ಆರ್ ಮಾಡಿರುವ ಕ್ರಮ ಅಸಂವಿಧಾನಿಕ ಮತ್ತು ಅಮಾನವೀಯವಾಗಿದೆ.
ಆಡಳಿತ ರೂಢ ಪಕ್ಷದ ಶಾಸಕರು ಜನಪ್ರತಿನಿದಿಗಳು ಆಗಿದ್ದು, ಜನರ ಸಮಸ್ಯೆ, ಬೇಕು, ಬೇಡಗಳನ್ನು, ಅಹವಾಲುಗಳನ್ನು ಕೇಳೋದು ಅವರ ಕರ್ತವ್ಯ. ಆದ್ರೆ, ದುರ್ದೈವ ಅಂದ್ರೆ, ಬೆಂಗಳೂರಿನ ವರ್ತೂರು ಕೆರೆ ಕೋಡಿ ವೀಕ್ಷಣೆ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಯ ಜೊತೆಗೆ ವಾಗ್ವಾದಕ್ಕೆ ಇಳಿದು, ಅವಾಚ್ಯವಾಗಿ ಬೈದಿರೋದ ಅವರ ಸಂಸ್ಕೃತಿ ಪರಿಚಯ ಹೇಳುತ್ತದೆ.
ಈ ಕೂಡಲೇ ಆಯೋಗ ಮಧ್ಯ ಪ್ರವೇಶ ಮಾಡಿ, ಮಹಿಳೆಯ ಘನತೆ, ಗೌರವ ಎತ್ತಿ ಹಿಡಿಯಲು, ಮಹಿಳೆಯ ಹಕ್ಕು ಮತ್ತು ಸ್ವಾತಂತ್ರ್ಯ ರಕ್ಷಣೆ ಮಾಡಲು ಮುಂದೆ ಬರಬೇಕು. ಜೊತೆಗೆ ಬೇಜವಾಬ್ದಾರಿಯಿಂದ ವರ್ತನೆ ಮಾಡಿದ ಶಾಸಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
IPC, CRPC ಕಾನೂನಿನ ಅನ್ವಯ FIR ದಾಖಲಿಸಲು ಸಂಭಂದಪಟ್ಟ ಪೊಲೀಸ್ ಅಧಿಕಾರಿಗಳು ಅವರಿಗೆ ನಿರ್ದೇಶನ ನೀಡಬೇಕು, ಒಂದು ವೇಳೆ ತಾವುಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗುವುದು ಅನಿರ್ವಾಯ ಆಗಲಿದೆ ಎಂದು ಎಚ್ವರಿಸಿದರು.
PublicNext
05/09/2022 06:51 pm