ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಪ್ರಭಾವಿ ಸಚಿವರಿಂದ ಕಿರುಕುಳ; SP ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ವಿಜಯನಗರ: ಒಂದೇ ಕುಟುಂಬದ ಒಂಬತ್ತು ಜನ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ವಿಜಯನಗರ ಜಿಲ್ಲೆಯ ಎಸ್‌ಪಿ ಕಚೇರಿ ಮುಂದೆ ನಡೆದಿದೆ.

ಹೊಸಪೇಟೆಯ ವಾರ್ಡ್ ನಂಬರ್ 6ರ ನಿವಾಸಿಗಳಾದ ದನಸೂರಿ ಪೋಲಪ್ಪ ಕುಟುಂಬಸ್ಥರು ನ್ಯಾಯಕ್ಕಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಾಗ ಒತ್ತುವರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದನಸೂರಿ ಪೋಲಪ್ಪ ಕುಟುಂಬಸ್ಥರಿಗೆ ಜಿಲ್ಲೆಯ ಪ್ರಭಾವಿ ಸಚಿವರು ಧಮ್ಕಿ ಹಾಕಿದ್ದರಂತೆ. ಈ ಬಗ್ಗೆ ಆರೋಪಿಸಿದ ಕುಟುಂಬವು ನಿನ್ನೆ (ಮಂಗಳವಾರ) ಹೊಸಪೇಟೆಯ ಎಸ್‌ಪಿ ಕಚೇರಿ ಮುಂದೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Edited By : Nagesh Gaonkar
PublicNext

PublicNext

31/08/2022 06:19 pm

Cinque Terre

48.45 K

Cinque Terre

4

ಸಂಬಂಧಿತ ಸುದ್ದಿ