ಮಧ್ಯಪ್ರದೇಶದ : ರೇವಾದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡನಾಗಿರೋ ರಿತುರಾಜ್, ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಕೇಸ್ ಬೆಳಕಿಗೆ ಬಂದಿದೆ. ಸದ್ಯ ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಬೆದರಿಸಿದ ಪ್ರಕರಣ ಮುನ್ನೆಲೆಗೆ ಬಂದಿದ್ದು, ಬಿಜೆಪಿ ಯುವಮೋರ್ಚಾದ ನಗರಾಧ್ಯಕ್ಷ ಅವರ ಅಂಗಡಿಗೆ ನುಗ್ಗಿ ಮಾಜಿ ಸೈನಿಕನಿಗೆ ಥಳಿಸಿ ಅಂಗಡಿಯ ಸಾಮಾನು ಒಡೆದು ಹಾಕಿದ್ದಾರೆ. ಹಲ್ಲೆಯಲ್ಲಿ ಮಾಜಿ ಸೈನಿಕ ಸೇರಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವನಾಯಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೆಲ ಮಾಹಿತಿಯ ಪ್ರಕಾರ, ಘಟನೆ ರೇವಾದ ಅಮಾಹಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ. ಇಲ್ಲಿ ನಿವೃತ್ತ ಯೋಧರಾಗಿರುವ ದಿನೇಶ್ ಮಿಶ್ರಾ ಇವರು ಪುರುಷರ ಪಾರ್ಲರ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾದ ನಗರಾಧ್ಯಕ್ಷ ರಿತುರಾಜ್ ಚತುರ್ವೆದಿ ತಮ್ಮ ಸಂಗಡಿಗರೊಂದಿಗೆ ಅಂಗಡಿಗೆ ಬಂದು ದಿನೇಶ್ ಮಿಶ್ರಾ ಅವರನ್ನು ಥಳಿಸಿದ್ಧಾರೆ ಎಂದು ಹೇಳಲಾಗುತ್ತಿದೆ.ಮಾಜಿ ಸೈನಿಕನ ದೂರಿನ ಮೇರೆಗೆ ಪೊಲೀಸರು ರಿತುರಾಜ್, ಅನುರಾಗ್ ಮಿಶ್ರಾ ಮತ್ತು ಅಮನ್ ಚತುರ್ವೇದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
11/08/2022 02:49 pm