ನವದೆಹಲಿ: ಹೆರಾಲ್ಡ್ ಭವನ ಸೀಜ್ ಆಗಿದೆ. ಇದು ಆಗೋದೇ ತಡ.ಪೊಲೀಸರು ಸೋನಿಯಾ ಗಾಂಧಿ ಅವರ ನಿವಾಸ ಮತ್ತು ಕಾಂಗ್ರೆಸ್ ಕಚೇರಿಯನ್ನ ಸುತ್ತುವರೆದಿದ್ದಾರೆ ಎಂದು ಸಂಸದ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಸದ ಜೈರಾಮ್ ರಮೇಶ್ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದ ದ್ವೇಷ ರಾಜಕಾರಣ, ಇನ್ನು ನಾವು ಸುಮ್ಮನೇ ಇರೋದಿಲ್ಲ. ಅನ್ಯಾಯದ ವಿರುದ್ಧ ಮತ್ತೆ ಧ್ವನಿ ಎತ್ತುತ್ತೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ನಿಜಕ್ಕೂ ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿಫಲತೆ ಎಂದ ಜೈರಾಮ್ ರಮೇಶ್, ಇದೇ ಶುಕ್ರವಾರ ಬೆಲೆ ಏರಿಕೆ ಖಂಡಿಸಿ ಪ್ರಧಾನಿ ಮೋದಿ ಮನೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಕೂಡ ಜೈರಾಮ್ ರಮೇಶ್ ವಿವರಿಸಿದ್ದಾರೆ.
PublicNext
03/08/2022 09:52 pm