ಚಿತ್ರದುರ್ಗ: ಸಾಹಿತಿ ಹಾಗೂ ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಇದೀಗ 3ನೇ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಾಹಿತಿ ಇದೆ. ಕೈಬರಹದಲ್ಲಿರುವಂತ ಪತ್ರದಲ್ಲಿ ಇದುವರೆಗೆ ಯಾಕೆ ಬಹಿರಂಗವಾಗಿ ಕ್ಷಮೆ ಕೇಳಿಲ್ಲ ಎಂಬುದಾಗಿ ವಾರ್ನ್ ಮಾಡಲಾಗಿದೆ.
ಇಂದು ಸಾಹಿತಿ ಬಿ.ಎಲ್ ವೇಣುಗೆ ಬಂದಿರುವಂತ ಬೆದರಿಕೆಯ 3ನೇ ಪತ್ರದಲ್ಲಿ ನೀವು ಯಾಕೆ ಇನ್ನೂ ಕ್ಷಮೆ ಕೇಳಿಲ್ಲ. ನಿಮಗೆ ತಾಕತ್ತಿದ್ದರೇ ದೇಶದ್ರೋಹಿ ಸಂಘಟನೆಗಳಿಗೆ ಬುದ್ದಿ ಹೇಳಿ ಎಂಬುದಾಗಿ ಎಚ್ಚರಿಸಲಾಗಿದೆ. ಇನ್ನೂ ಪಿಎಫ್ಐ, ಎಸ್ ಡಿ ಪಿಐ ಹಾಗೂ ಸಿಎಫ್ಐ ನಂತಹ ದೇಶದ್ರೋಹಿ ಸಂಘಟನೆಗಳಿಗೆ ಬುದ್ಧಿಹೇಳಬೇಕು. ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದ 61 ಎಡಬಿಡಂಗಿಗಳಿಗೆ ತಿಳಿ ಹೇಳಬೇಕು ಎಂದು ಹೇಳಲಾಗಿದೆ.
PublicNext
20/07/2022 05:28 pm