ಮುಂಬೈ: ಶಿವಸೇನಾ ನಾಯಕ ಸಂಜಯ್ ರಾವತ್ ಇಂದು ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಕಳೆದ ಬಾರಿ ನೋಟಿಸ್ ಕೊಟ್ಟರೂ ಸಂಜಯ್ ರಾವತ್,ಕೆಲಸವಿದೆ ಎಂದು ನುಣಿಚಿಕೊಂಡಿದ್ದರು.
ಹೌದು.ಸಂಜಯ್ ರಾವತ್ ಇಂದು ಮಧ್ಯಾಹ್ನ ಇಡಿ ಕಚೇರಿಗೆ ವಿಚಾರಣೆಗೆ ಹೋಗುತ್ತಿದ್ದಾರೆ. ಟ್ವಿಟರ್ ಮೂಲಕವೇ ಈ ವಿಷಯ ತಿಳಿಸಿದ್ದಾರೆ.
ನನಗೆ ನೀಡಿದ್ದ ಇಡಿ ಸಮನ್ಸ ಗೌರವಿಸುತ್ತೇನೆ.ತನಿಖಾ ಸಂಸ್ಥೆಗೆ ಸಹಕಾರ ನೀಡೋದು ನನ್ನ ಆದ್ಯ ಕರ್ತವ್ಯ ಅಂತಲೇ ಸಂಜಯ್ ರಾವತ್ ಹೇಳಿಕೊಂಡಿದ್ದಾರೆ. ಇಡಿ ಕಚೇರಿ ಬಳಿ ಯಾರೂ ಜಮಾಯಿಸಲೇಬಾರದು ಅಂತಲೂ ತಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
PublicNext
01/07/2022 01:41 pm