ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಮೂಹಿಕ ಅತ್ಯಾಚಾರ ಕೇಸ್ ಅನಿರೀಕ್ಷಿತವಾಗಿ ಸಂಭವಿಸುತ್ತವೆ : ಆಂಧ್ರ ಗೃಹ ಸಚಿವೆ ತಾನೆತಿ ವನಿತಾ

ಅಮರಾವತಿ: ರೇಪಲ್ಲಿ ರೈಲ್ವೆ ನಿಲ್ದಾಣದಲ್ಲಿ 25 ವರ್ಷದ ಗರ್ಭಿಣಿ ಮೇಲೆ ನಡೆದ ಸಾಮೂಹಿಕ ರೇಪ್ ಆಕಸ್ಮಿಕ. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಎಂದು ಆಂಧ್ರ ಪ್ರದೇಶ ಗೃಹ ಸಚಿವೆ ತಾನೆತಿ ವನಿತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಇನ್ನು ಸಚಿವೆಯ ಹೇಳಿಕೆ ಸಾರ್ವಜನಿಕ ವಲಯದಲ್ಲಿನ ಆಕ್ರೋಶಕ್ಕೆ ಕಾರಣವಾಗಿದೆ. ಮೇ 1ರಂದು ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಸಂತ್ರಸ್ತೆಯ ಗಂಡನ ಬಳಿ ಹಣ ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಮಹಿಳೆ ಮಧ್ಯಪ್ರವೇಶಿಸಿದಾಗ ಅನಿರೀಕ್ಷಿತವಾಗಿ ಘಟನೆ (ಅತ್ಯಾಚಾರ) ನಡೆದಿದೆ. ಇಂತಹ ಘಟನೆಗಳು ಸಂಭವಿಸುತ್ತಿರುತ್ತವೆ’ ಎಂದು ವನಿತಾ ತಿಳಿಸಿದ್ದರು.ಅತ್ಯಾಚಾರದ ಘಟನೆಗಳಿಗೆ ‘ಮಾನಸಿಕ ಪರಿಸ್ಥಿತಿ’ ಮತ್ತು ‘ಬಡತನ’ ಕಾರಣವೆಂದು ದೂರಿರುವ ವನಿತಾ, ‘ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ’ ಎಂದಿದ್ದಾರೆ. ಅತ್ಯಾಚಾರದಂತಹ ಘಟನೆಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ.

ಪ್ರತಿಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಅತ್ಯಾಚಾರ ಪ್ರಕರಣವನ್ನು ಖಂಡಿಸಿದ್ದು, ಈ ವಿಚಾರವಾಗಿ ತಾನೆತಿ ವನಿತಾ ನೀಡಿರುವ ಹೇಳಿಕೆಗಳು ಬೇಜವಾಬ್ದಾರಿತನ ತೋರುತ್ತದೆ ಎಂದು ಕಿಡಿಕಾರಿದೆ.

Edited By : Nirmala Aralikatti
PublicNext

PublicNext

06/05/2022 04:06 pm

Cinque Terre

64.26 K

Cinque Terre

18

ಸಂಬಂಧಿತ ಸುದ್ದಿ