ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಾಜಿ ಹುಟ್ಟಿದ ದೇಶದಲ್ಲಿ ಹುಟ್ಟಿದ್ದೇನೆ: ಬೆದರಿಕೆಗೆ ಬಗ್ಗಲ್ಲ ಎಂದ ರೇಣುಕಾಚಾರ್ಯ

ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿದ ದೇಶದಲ್ಲಿ ನಾನು ಹುಟ್ಟಿದ್ದೇನೆ ನಾನು ಯಾವುದೇ ಬೆದರಿಕೆಗೆ ಬಗ್ಗಲ್ಲ. ಜೀವ ಬೆದರಿಕೆ ಕರೆಗಳಿಗೆ ಜಗ್ಗಲ್ಲ ಬಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬೆದರಿಕೆ ಕರೆ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಜಾಬ್ ಹಾಗೂ ಹಲಾಲ್ ಕಟ್ ವಿಚಾರವಾಗಿ ರೇಣುಕಾಚಾರ್ಯ ಕೆಲವು ಹೇಳಿಕೆಗಳನ್ನು ನೀಡಿದ್ದರು. ಈ ಹೇಳಿಕೆಗಳನ್ನು ವಿರೋಧಿಸಿ ಕಿಡಿಗೇಡಿಯೊಬ್ಬ ರೇಣುಕಾಚಾರ್ಯಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಇದಕ್ಕೆ ಉತ್ತರವಾಗಿ ರೇಣುಕಾಚಾರ್ಯ ಈ ರೀತಿ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

31/03/2022 02:48 pm

Cinque Terre

43.97 K

Cinque Terre

10

ಸಂಬಂಧಿತ ಸುದ್ದಿ