ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತರ ಕಗ್ಗೊಲೆಗೆ ಸಂಸದ ಪ್ರತಾಪ್ ಸಿಂಹ ತೀವ್ರ ನೋವುಪಟ್ಟುಕೊಂಡಿದ್ದಾರೆ. ತಮ್ಮ ಸರ್ಕಾರ ಇರೋವಾಗಲೇ ಈ ಕಗ್ಗೊಲೆ ಆಗಿರೋದೆ ಅತೀವ ಬೇಸರ ಮೂಡಿಸಿದೆ ಅಂತಲೇ ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪ್ರತಿ ಸಾರಿನೂ ನಾವೂ ಸಿದ್ದರಾಮಯ್ಯನವರನ್ನ ಟೀಕಿಸುತ್ತಿದ್ದೇವು. ಆದರೆ ಈಗ ನಮ್ಮ ಸರ್ಕಾರವೇ ಇದೆ. ಆದರೂ ಬಜರಂಗದಳ ಕಾರ್ಯಕರ್ತನ ಕೊಲೆ ಆಗಿ ಬಿಟ್ಟಿದೆ. ನನಗೆ ನಾಚಿಕೆ ಅನಿಸುತ್ತಿದೆ ಅಂತಲೇ ನೋವಿನಿಂದಲೇ ನುಡಿದ್ದಾರೆ.
ಹಿಜಾಬ್ ವಿವಾದಿಂದ ರಾಜ್ಯದಲ್ಲಿ ಅಶಾಂತಿ ನೆಲೆಸಿದೆ.ಕೋರ್ಟ್ ಮಧ್ಯಂತರ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ.144 ಸೆಕ್ಷನ್ ಉಲ್ಲಂಘನೆ ಆಗುತ್ತಿದೆ. ಆದರೂ ಏನೂ ಕ್ರಮ ಆಗುತ್ತಲೇ ಇಲ್ಲ. ಈಗ ನೋಡಿದ್ರೆ ನಮ್ಮ ಕಾರ್ಯಕರ್ತನ ಕೊಲೆ ಆಗಿದೆ. ಇನ್ನು ಯಾವಾಗ ಸರ್ಕಾರ ಕ್ರಮ ತೆಗೆದುಕೊಳ್ಳುವುದ ಅಂತಲೇ ಪ್ರಶ್ನೆ ಮಾಡಿದ್ದಾರೆ ಪ್ರತಾಪ್ ಸಿಂಹ.
ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಾಟೆ ಆದಾಗಲೇ,ಎಸ್ಡಿಪಿಐ, ಪಿಎಫ್ ಐ ಮೇಲೆ ಕ್ರಮ ಆಗಬೇಕಿತ್ತು. ಅವು ಬ್ಯಾನ್ ಆಗಬೇಕಿತ್ತು. ಅದು ಆಗಲೇ ಇಲ್ಲ. ಒಂದು ವೇಳೆ ಆಗಿದ್ದರೇ ಹರ್ಷಾ ಹತ್ಯೆ ಆಗುತ್ತಿರಲಿಲ್ಲ ಅಂತಲೇ ಪ್ರತಾಪ್ ಸಿಂಹ ಹೇಳಿದ್ದಾರೆ.
PublicNext
21/02/2022 05:55 pm