ಕಲಬುರಗಿ: ಲೈಂಗಿಕ ದೌರ್ಜನ್ಯದ ಬಗ್ಗೆ ಮಹಿಳೆಯೊಬ್ಬರು ಬಿಜೆಪಿಯ ಶಾಸಕ ರಾಜಕುಮಾರ ಪಾಟೀಲ್ ಮೇಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುತ್ತಿರೋವಾಗಲೇ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಕಣ್ಣೀರು ಹಾಕುತ್ತಲೇ ಕೆಲ ಕ್ಷಣ ಮೌನಕ್ಕೆ ಜಾರಿದ್ದಾರೆ.
ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಪಕ್ಷದ ಮರ್ಯಾದೆ ತೆಗೆಯುವಂತ ಕೆಟ್ಟ ಕೆಲಸವನ್ನ ನಾನು ಮಾಡಿಯೇ ಇಲ್ಲ. ಈ ವಿಚಾರವಾಗಿಯೇ ಫೆಬ್ರವರಿ-5ರಂದು ನಾನು ವಿಧಾನಸೌಧ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ ಎಂದು ಶಾಸಕ ರಾಜಕುಮಾರ ಅಳಲು ತೋಡಿಕೊಂಡಿದ್ದಾರೆ.
ನನ್ನ ಮೇಲೆ ನಿರಂತರವಾಗಿಯೇ ಬ್ಲ್ಯಾಕ್ ಮೇಲೆ ನಡೀತಾನೇ ಇದೆ. ಆದರೆ ನಾನು ಎಲ್ಲವನ್ನೂ ಕಾನೂನು ರೀತಿಯಲ್ಲಿಯೇ ಎದುರಿಸಲು ಸಿದ್ಧ ಎಂದು ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಕಲಬುರಗಿಯಲ್ಲಿ ಹೇಳಿದ್ದಾರೆ.
PublicNext
07/02/2022 03:49 pm