ತುಮಕೂರು : ವಿಧಾನಪರಿಷತ್ ಚುನಾವಣೆ ಪ್ರಚಾರ ಕಾರ್ಯದಲ್ಲಿ ಆಕ್ಟೀವ್ ಆಗಿದ್ದ ಪ್ರಸನ್ನ ಕುಮಾರ್ ತಾಲೂಕು ಬಿಜೆಪಿಯಲ್ಲಿ ರೈತ ಯುವಮೋರ್ಚ ಕಾರ್ಯಕಾರಿಣಿ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕೊಲೆ ಮಾಡಲಾಗಿದೆ.
ಹೌದು ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತ ಪ್ರಸನ್ನ ಕುಮಾರ್ (46) ಪಾವಗಡದಿಂದ ಸ್ವಗ್ರಾಮ ಅಪ್ಪಾಜಿಹಳ್ಳಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪಾವಗಡ ಪಟ್ಟಣ ಹೊರವಲಯದ ಬಿ.ಕೆ ಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಇನ್ನು ಪ್ರಸನ್ನ ಕುಮಾರ್ ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
08/12/2021 07:17 am