ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಸುಮಾರು 12 ತಾಸುಗಳ ವಿಚಾರಣೆಗಳ ಬಳಿಕ ದೇಶ್‌ಮುಖ್ ಅವರನ್ನು ಅರೆಸ್ಟ್ ಮಾಡಲಾಗಿದೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ) ನಾಯಕರಾದ ದೇಶ್ ಮುಖ್ ವಿರುದ್ಧ ಸುಮಾರು 100 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಕೇಸ್ (ಮನಿ ಲಾಂಡರಿಂಗ್) ಆರೋಪ ಇತ್ತು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಇ.ಡಿ ಅಧಿಕಾರಿಗಳು, ಲುಕ್ ಔಟ್ ಜಾರಿ ಮಾಡಿದ್ದರು. ವಿಚಾರಣೆ ನಂತರ ಅವರನ್ನು ಬಂಧಿಸಲಾಗಿದೆ.
PublicNext
02/11/2021 12:38 pm